ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ನಾಗಾಲ್ಯಾಂಡಿನ 60 ಸ್ಥಾನಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಮುಂಜಾನೆಯಿಂದ ಮತದಾನ ಆರಂಭವಾಗಿದೆ. ರಾಷ್ಟ್ರಪತಿ ಆಳ್ವಿಕೆಯಲ್ಲಿ ಮತದಾನ ನಡೆಯುತ್ತಿರುವುದು ಇದು ನಾಲ್ಕನೆ ಬಾರಿ.
ನಸುಕಿಗೂ ಮುಂಚಿನ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ಚುಮುಗುಟ್ಟುವ ಚಳಿಯಲ್ಲೂ, ಮತದಾರರು ಮತಗಟ್ಟೆಗಳ ಬಳಿ, ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಲು ಸಾಲುಗಟ್ಟಿದ್ದಾರೆ.
ಹದಿಮೂರು ಲಕ್ಷ ಮತದಾರರು 218 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. ಒಟ್ಟು 218 ಅಭ್ಯರ್ಥಿಗಳಲ್ಲಿ ಒಟ್ಟು ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ ನಾಲ್ಕು. ಮಾಜಿಮುಖ್ಯಮಂತ್ರಿಗಳಿಬ್ಬರಾದ ನೆಯ್ಪುಯಿ ರಿಯೋ(ಎನ್‌ಪಿಎಫ್) ಮತ್ತು ಕೆ.ಎಲ್ ಚಿಶಿ(ಕಾಂಗ್ರೆಸ್) ಸಿಎಲ್‌ಪಿ ನಾಯಕ ಐ ಐಮೊಕಾಂಗ್ ಮುಂತಾದ ಘಟಾನುಘಟಿಗಳು ಕಣದಲ್ಲಿದ್ದಾರೆ. 33 ಪಕ್ಷೇತರ ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.
|