"ರಾಷ್ಟ್ರದ ರೈತರ ಕಣ್ಣೀರು ಸಂಪೂರ್ಣ ಅಳಿಸುವ ನಾವು ನಿಲ್ಲಲಾರೆವು" ಎಂದು ಹೇಳಿದ ಪ್ರಧಾನಿ ಮನಮೋಹನ್ ಸಿಂಗ್, ಇದಕ್ಕಾಗಿಯೇ ಹಿಂದೆಂದೂ ಕಾಣದ ಮಟ್ಟದಲ್ಲಿ ರೈತರ ಸಾಲ ಮನ್ನಾದ ಐತಿಹಾಸಿಕ ನಿರ್ಣಯ ಕೈಗೊಂಡಿದ್ದೇವೆ. ಈ ಮಟ್ಟದ ಸಾಲಪರಿಹಾರ ಕ್ರಮವು ಹಿಂದೆಂದಿಗೂ ನಡೆಯಲಿಲ್ಲ ಮತ್ತು ಪ್ರಯತ್ನವನ್ನೂ ಮಾಲಾಗಿಲ್ಲ ಎಂದು ನುಡಿದರು.
ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರಿಸಿ ಮಾತನಾಡುತ್ತಿದ್ದ ಅವರು ಕೃಷಿವಲಯದ ಬಿಕ್ಕಟ್ಟು ಎನ್‌ಡಿಎ ಸರಕಾರದ ಪಳಿಯುಳಿಕೆ ಎಂದು ದೂರಿದರಲ್ಲದೆ, "ಎನ್‌ಡಿಎ ಸರಕಾರದ ನೀತಿಗಳು ರೈತವಿರೋಧಿ, ಕೃಷಿ ವಿರೋಧಿಯಾಗಿತ್ತು. ಕೆಳ ಮಟ್ಟದ ಕನಿಷ್ಠ ಬೆಂಬಲ ಬೆಲೆಗಳು ನಮ್ಮ ರೈತರನ್ನು ದಾರಿದ್ರ್ಯಕ್ಕೆ ತಳ್ಳಿದೆ. ಅವರಿಗೆ ಹೊಸ ಸಾಲದ ಹರಿವಿನ ಅವಶ್ಯಕತೆ ಇತ್ತು" ಎಂದು ತರಾಟೆಗೆ ತೆಗೆದುಕೊಂಡರು.
ಅರುವತ್ತು ಸಾವಿರ ಕೋಟಿ ರೂಪಾಯಿ ಸಾಲ ಮನ್ನಾಗೆ ಸಂಪನ್ಮೂಲಗಳು ಯಾವುದೆಂದು ವಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಇತರ ವಿರೋಧಪಕ್ಷಗಳ ನಾಯಕರು ಪ್ರಶ್ನಿಸಿದಾಗ ಕಟುವಾಗಿ ಪ್ರತಿಕ್ರಿಯಿಸಿದ ಪ್ರಧಾನಿ, ರೈತರ ದುರ್ದೆಸೆಗೆ ಎನ್‌ಡಿಎ ಸರಕಾರವೇ ಕಾರಣ ಎಂದು ಹೇಳಿದರು.
ಸಾಲಮನ್ನಾವು ರೈತರಿಗೆ ಸಾಂಸ್ಥಿಕ ಸಾಲಗಳ ಹೊಸಹರಿವಿಗೆ ಅನುಕೂಲ ಒದಗಿಸಲಿದೆ. ಇದು ಬ್ಯಾಂಕ್ ಬ್ಯಾಲೆನ್ಸ್‌ಶೀಟ್‌ಗಳನ್ನು ಚೊಕ್ಕಟಗೊಳಿಸಲಿದೆ. ಇದು ಗ್ರಾಮೀಣ ಪ್ರದೇಶದ ಆರ್ಥಿಕ ಚಟುವಟಿಕೆಗೆಳನ್ನು ಉತ್ತೇಜಿಸಲಿದೆ ಎಂದು ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
|