ದಕ್ಷಿಣ ಕಾಶ್ಮೀರದ ಮನೆಯೊಂದರಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ 65ರ ಹರೆಯದ ಮಹಿಳೆಯೊಬ್ಬಾಕೆ ಸೇರಿದಂತೆ ಇಬ್ಬರು ಮೃತರಾಗಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯನ್ನ ರೇಶಿ ನಗ್ರಿ ಎಂಬಲ್ಲಿ ಅಬ್ದುಲ್ ಹಮೀದ್ ನೆಂಗ್ರೂ ಎಂಬಾತನ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಮನೆಯೊಡತಿ ಜನ ಅಲಿಯಾಸ್ ಜಂತಿ ಹಾಗೂ ಬಶೀರ್ ಅಹ್ಮದ್ ವಾಗಾಯ್ ಎಂಬಿಬ್ಬರು ಸಾವಿಗೀಡಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಫೋಟವು ಮನೆಯೊಳಗೆ ಸಂಭವಿಸಿದೆಯೆ ಅಥವಾ, ಸ್ಫೋಟಕವನ್ನು ಹೊರಗಿನಿಂದ ಎಸೆಯಲ್ಪಟ್ಟಿದೆಯೆ ಎಂಬುದು ತಿಳಿದು ಬಂದಿಲ್ಲ.
|