ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ರಾಮಸೇತು ವಿವಾದಕ್ಕೆ ಸಂಬಂಧಿಸಿದ ಅರ್ಜಿದಾರರಿಗೆ, ಕೇಂದ್ರ ಸರಕಾರವು ಸಲ್ಲಿಸಿರುವ ಆರು ಪುಟಗಳ ಅಫಿದಾವಿತ್‌ಗೆ ಉತ್ತರ ನೀಡಲು ಎಪ್ರಿಲ್ 15ರ ತನಕ ಸಮಯಾವಕಾಶ ನೀಡಿದೆ.
ಅಫಿದಾವಿತ್‌ನ ಪ್ರತಿ ನಿನ್ನೆಯಷ್ಟೆ ತನಗೆ ಲಭಿಸಿದ್ದು, ಇದಕ್ಕೆ ಉತ್ತರಿಸಲು ಸಮಯಾವಕಾಶ ಬೇಕು ಎಂದು ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ನ್ಯಾಯಪೀಠದ ಬಳಿ ಸ್ವಾಮಿ ವಿನಂತಿಸಿದರು.
ಆಡಮ್ ಸೇತುವೆ ಎಂದೂ ಕರೆಯಲ್ಪಡುವ ರಾಮಸೇತು ಮಾನವ ನಿರ್ಮಿತವಾದುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಕೇಂದ್ರ ತನ್ನ ಪ್ರಮಾಣ ಪತ್ರದಲ್ಲಿ ಹೇಳಿದೆ. ಇದು ಮಾನವ ನಿರ್ಮಿತವೇ ಅಥವಾ, ನೈಸರ್ಗಿಕವಾದುದೇ ಎಂಬುದರ ತೀರ್ಮಾನವನ್ನು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಬಿಟ್ಟಿದೆ.
|