ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಲಕ್ಷಾಂತರ ಭಕ್ತರು ಜಗತ್ಪ್ರಸಿದ್ಧ ಕಾಶಿವಿಶ್ವನಾಥ ದೇವಾಲಯದಲ್ಲಿ ದೇವರ ದರ್ಶನ ಪಡೆದರು. ದೇವಾಲಯದಲ್ಲಿ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿತ್ತು. ಶಿವರಾತ್ರಿ ಹಬ್ಬದ ವಾತಾವರಣವು ಪವಿತ್ರನಗರಿಯೆಲ್ಲೆಡೆ ಪಸರಿಸಿದೆ.
ಮಹಾ ಆರತಿಯೊಂದಿಗೆ ಶಿವಾರಾತ್ರಿ ಆರಾಧನೆ ಆರಂಭಗೊಂಡಿತು. ಶಿವರಾತ್ರಿಯಂಗವಾಗಿ ದೇವಾಲಯದಲ್ಲಿ ರಾತ್ರಿಯಿಡೀ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಮೊತ್ತಮೊದಲ ಬಾರಿಗೆ ದೇವಾಲಯವು 501ರೂಪಾಯಿ ದರದ 1000 ಪಾಸುಗಳನ್ನು ವಿತರಿಸಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದಲ್ಲಿ ಈ ಪಾಸುಗಳನ್ನು ನೀಡಲಾಗಿದೆ.
ಪಾಸು ಹೊಂದಿರುವ ಭಕ್ತರನ್ನು ವಿವಿಐಪಿಗಳೊಂದಿಗೆ ನೀಲಕಂಠ ದ್ವಾರದ ಮೂಲಕ ದೇವಾಲಯದೊಳಗೆ ಬಿಡಲಾಗುತ್ತಿದೆ. ದೇವಾಲಯದ ಸುತ್ತುಮುತ್ತೆಲ್ಲ ಜನಸಾಗರವೇ ಹರಿದಿದೆ.
|