ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವದಲ್ಲೇ 7ನೆ ಕೊಳಕು ನಗರ ಮುಂಬೈ!
ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈಯನ್ನು ವಿಶ್ವದಲ್ಲಿ ಏಳನೇ ಅತ್ಯಂತ ಕೊಳಕು ನಗರ ಎಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿದೆ.

ಮರ್ಸರ್ ಮಾನವ ಸಂಪನ್ಮೂಲ ಸಲಹೆಗಳ 2007ರ ಆರೋಗ್ಯ ಮತ್ತು ನೈರ್ಮಲ್ಯ ರಾಂಕಿನ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದ್ದು, ಅಜರ್‌ಬೈಜಾನ್‌ನ ಬಾಕು ನಗರ ಪ್ರಥಮ ಸ್ಥಾನದಲ್ಲಿದೆ.

ಸುಮಾರು 160 ಲಕ್ಷ ಜನತೆಯನ್ನು ಹೊಂದಿರುವ ಮುಂಬೈ ಕೊಳಕಿನಲ್ಲಿ ಯುದ್ಧ ಜರ್ಜರಿತ ಬಗ್ದಾದ್ಅನ್ನು ಹಿಂದಿಕ್ಕಿದೆ. ಆದರೆ ಈ ರಾಂಕ್‌ಗೆ ಪ್ರತಿಕ್ರಿಯಿಸಿರುವ ಮುಂಬೈ ನಗರಾಧಿಕಾರಿಗಳು, ನಗರವು ಈಗ ಹಿಂದೆಗಿಂತ ಹೆಚ್ಚು ನೈರ್ಮಲ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ, ಮುಂಬೈಯನ್ನು ಇತರ ನಗರಗಳಿಗೆ ಹೋಲಿಸುವಾಗ ನಗರದ ನೈರ್ಮಲ್ಯವನ್ನು ಆಳೆಯಲು ಬಳಸಲಾದ ಆಧಾರವು ಸೂಕ್ತವಾಗಿಲ್ಲ ಎಂದು ಹೇಳಿದ್ದಾರೆ. ನಾವು ಯೋಜನೆಯನ್ನು ಆರಂಭಿಸಿದ್ದೇವೆ ಮತ್ತು ನಗರವು ಹಿಂದೆಂದಿಗಿಂತ ಈಗ ನಿರ್ಮಲವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಬಿಎಂಸಿಯ ಹೆಚ್ಚುವರಿ ಆಯುಕ್ತ ಆರ್.ಎ.ರಾಜೀವ್ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ರೀಡರ್ಸ್ ಡೈಜೆಸ್ಟ್ ಪತ್ರಿಕೆಯು ಮುಂಬೈಯನ್ನು ಅತ್ಯಂತ ಒರಟು ನಗರವೆಂದು ಹೇಳಿತ್ತು. ಕೆಲವರು ಮುಂಬೈಗರಿಗೆ ನಾಗರಿಕ ಪ್ರಜ್ಞೆ ಇಲ್ಲ ಎಂದು ದೂರುತ್ತಿದ್ದರೆ, ಇನ್ನೂ ಕೆಲವರು ಅಧಿಕಾರಿಗಳು ನಗರವನ್ನು ನೀಟಾಗಿರಿಸಿಕೊಳ್ಳಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರುತ್ತಿದ್ದಾರೆ.
ಮತ್ತಷ್ಟು
ಬಿಹಾರಿಗಳ ಮೇಲೆ ಕೆಂಡ: ಬಾಳ ಠಾಕ್ರೆ ಸರದಿ
ಲಕ್ಷಾಂತರ ಭಕ್ತರಿಂದ ಕಾಶಿವಿಶ್ವನಾಥನ ದರ್ಶನ
ರಾಮಸೇತು ವಿಚಾರಣೆ ಎ.15ಕ್ಕೆ
ಕಾಶ್ಮೀರ ಸ್ಫೋಟಕ್ಕೆ ಇಬ್ಬರ ಆಹುತಿ
ರೈತರ ಕಣ್ಣೀರು ಅಳಿಸುವ ತನಕ ನಿಲ್ಲೆವು: ಪ್ರಧಾನಿ
ಉ.ಪ್ರ: ವಿದ್ಯಾರ್ಥಿ ಸಂಘನಿಷೇಧ ಹಿಂತೆಗೆತ