ಉತ್ತರ ಭಾರತೀಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ತಮ್ಮ ಹೋರಾಟಕ್ಕೆ ಚಿತ್ರ ಕಲಾವಿದರ ಬೆಂಬಲ ಪಡೆಯಲು ಮುಂದಾಗಿದ್ದಾರೆ. ನಾನಾ ಪಟೇಕರ್, ಸುನಿಲ್ ಶೆಟ್ಟಿ ಹಾಗೂ ಮತ್ತಿತರರು ರಾಜ್ ಠಾಕ್ರೆಯ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ವಿಧಿಸಿರುವ ಅಡ್ಡಿಯನ್ನು ಪ್ರತಿಭಟಿಸಲು ಅರ್ಜಿಯೊಂದಕ್ಕೆ ಸಹಿ ಹಾಕಿದ್ದಾರೆ.
ಮುಂಬೈ ತ್ಯಜಿಸುವಂತೆ ಉತ್ತರಭಾರತೀಯರ ವಿರುದ್ಧ ರಾಜ್ ಅಭಿಯಾನವನ್ನು ಬೆಂಬಲಿಸುವುದಿಲ್ಲವಾದರೂ, ಅವರ ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸುವಿಕೆ ಅಸಮಂಜಸ ಎಂದು ಚಿತ್ರಕಥೆ ಲೇಖಕ ಸಲೀಂ ಖಾನ್ ಹೇಳಿದ್ದಾರೆ.
ಬಾಲಿವುಡ್‌ನ ಪ್ರಮುಖರ ಸಹಿ ಪಡೆದಿರುವ ಠಾಕ್ರೆ ಚಿತ್ರ ಕಲಾವಿದ ಸಂಘದ ಬೆಂಬಲವನ್ನೂ ಕೋರಿದ್ದಾರೆ. ರಾಜಕಾರಣಿ ರಾಜ್ ಠಾಕ್ರೆ ಬಹಳಕಾಲದಿಂದ ಚಿತ್ರನಟರ ಸ್ನೇಹ ಹೊಂದಿದ್ದಾರೆ. ಚಿತ್ರೋದ್ಯಮದ ಜತೆಗಿನ ಗಾಢಸ್ನೇಹವನ್ನು ರಾಜ್ ಠಾಕ್ರೆ ಬಳಸಿಕೊಂಡಿದ್ದಾರೆ.
|