ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಜಪೇಯಿ 'ರಾಜಕೀಯ ಭೀಷ್ಮ'ನೆಂದ ಪ್ರಧಾನಿ
ಅಟಲ್ ಬಿಹಾರಿ ವಾಜಪೇಯಿ ಅವರನ್ನು ರಾಜಕೀಯ ಭೀಷ್ಮನೆಂದು ಬಣ್ಣಿಸಿದ ಮನಮೋಹನ್ ಸಿಂಗ್, ಅವರು ಸಂಕುಚಿತ ರಾಜಕೀಯವನ್ನು ಬದಿಗಿರಿಸಿ, ರಾಷ್ಟ್ರೀಯ ಹಿತಾಸಕ್ತಿಗಾಗಿ ಆತ್ಮಸಾಕ್ಷಿಗೆ ತಕ್ಕಂತೆ ನಡೆಯಬೇಕು ಎಂದು ಹೇಳಿದ್ದಾರೆ.

ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ರಾಜ್ಯ ಸಭೆಯಲ್ಲಿ ತಮ್ಮ ನಿಕಟಪೂರ್ವ ಪ್ರಧಾನಿಯ ಬೆಂಬಲ ಯಾಚಿಸಿದ ಸಿಂಗ್ "ಭೀಷ್ಮ ಪಿತಾಮಹ ಅಟಲ್ ಬಿಹಾರಿ ವಾಜಪೇಯಿ ತನ್ನ ಆತ್ಮಸಾಕ್ಷಿಗೆ ಓಗೊಟ್ಟು ಸಂಕುಚಿತ ರಾಜಕೀಯ ಬದಿಗೊತ್ತಿ ರಾಷ್ಟ್ರೀಯ ಹಿತಾಸಕ್ತಿ ಕಾಪಡಬೇಕು" ಎಂದು ನುಡಿದರು.

ಹಿಂದಿನ ಎನ್‌ಡಿಎ ಸರಕಾರದ ಮೇಲೆ ಪ್ರಧಾನಿ ತೀವ್ರ ವಾಗ್ದಾಳಿ ಮಾಡಿದರಾದರೂ, ಪಾಕಿಸ್ತಾನದ ಜತೆ ಶಾಂತಿ ಸಂಧಾನ ಯತ್ನದಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟ ವಾಜಪೇಯಿ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಹೇಳಿದರು.
ಮತ್ತಷ್ಟು
ರಾಜ್ ಠಾಕ್ರೆಗೆ ಸಿನಿತಾರೆಯರ ಬೆಂಬಲ
ವಿಶ್ವದಲ್ಲೇ 7ನೆ ಕೊಳಕು ನಗರ ಮುಂಬೈ!
ಬಿಹಾರಿಗಳ ಮೇಲೆ ಕೆಂಡ: ಬಾಳ ಠಾಕ್ರೆ ಸರದಿ
ಲಕ್ಷಾಂತರ ಭಕ್ತರಿಂದ ಕಾಶಿವಿಶ್ವನಾಥನ ದರ್ಶನ
ರಾಮಸೇತು ವಿಚಾರಣೆ ಎ.15ಕ್ಕೆ
ಕಾಶ್ಮೀರ ಸ್ಫೋಟಕ್ಕೆ ಇಬ್ಬರ ಆಹುತಿ