ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರ್ಚ್ 7ರಿಂದ ಗರೀಬ್ ರಥ್ ಓಡಾಟ
ಪೂರ್ಣ ಹವಾನಿಯಂತ್ರಿತ ಗರೀಬ್ ರಥ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಭುವನೇಶ್ವರ ಮತ್ತು ರಾಂಚಿ ನಡುವೆ ಮಾರ್ಚ್ 7ರಿಂದ ಓಡಾಡಲಿದೆ. ಈ 'ಗರೀಬ್ ರಥ್' ವಾರಕ್ಕೆ ಮೂರು ಬಾರಿ ಓಡಾಡಲಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ಆರ್.ವೇಲು ಭುವನೇಶ್ವರ ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಿದ್ದಾರೆಂದು ರೈಲ್ವೆ ಮೂಲಗಳು ತಿಳಿಸಿವೆ.

ನೂತನ ರೈಲು ರಾಂಚಿಯಿಂದ ತನ್ನ ನಿಯಮಿತ ಸಂಚಾರವನ್ನು ಮಾ.8ರಿಂದ ಮತ್ತು ಭುವನೇಶ್ವರದಿಂದ ಮಾ.9ರಿಂದ ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ರೈಲಿಗೆ 8 ಎಸಿ-3 ಹಂತ ಮತ್ತು 3 ವಿದ್ಯುತ್-ಕಾವಲು ಬೋಗಿಗಳನ್ನು ಅಳವಡಿಸಲಾಗಿದ್ದು, ಕಟಕ್, ಡೆಂಕನಲ್, ತಾಲ್ಚರ್ ರಸ್ತೆ, ಅಂಗುಲ್, ಸಂಬಲ್‌ಪುರ ನಗರ, ಜಾರ್ಸುಗುಡ, ರೂರ್ಕೆಲಾ ಮತ್ತು ಹಾಟಿಯದಲ್ಲಿ ನಿಲುಗಡೆ ಇದೆ. ರೈಲಿನ ಪ್ರತಿಬೋಗಿಯಲ್ಲಿ 78 ಬರ್ತ್‌ಗಳಿದ್ದು, 632 ಪ್ರಯಾಣಿಕರಿಗೆ ಸ್ಥಳಾವಕಾಶ ಒದಗಿಸಲಾಗಿದೆ
ಮತ್ತಷ್ಟು
ವಾಜಪೇಯಿ 'ರಾಜಕೀಯ ಭೀಷ್ಮ'ನೆಂದ ಪ್ರಧಾನಿ
ರಾಜ್ ಠಾಕ್ರೆಗೆ ಸಿನಿತಾರೆಯರ ಬೆಂಬಲ
ವಿಶ್ವದಲ್ಲೇ 7ನೆ ಕೊಳಕು ನಗರ ಮುಂಬೈ!
ಬಿಹಾರಿಗಳ ಮೇಲೆ ಕೆಂಡ: ಬಾಳ ಠಾಕ್ರೆ ಸರದಿ
ಲಕ್ಷಾಂತರ ಭಕ್ತರಿಂದ ಕಾಶಿವಿಶ್ವನಾಥನ ದರ್ಶನ
ರಾಮಸೇತು ವಿಚಾರಣೆ ಎ.15ಕ್ಕೆ