ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುರ್ತು ಸಮನ್ವಯ ಸಮಿತಿ ಸಭೆಗೆ ಎಡ ಪಕ್ಷದ ಆಗ್ರಹ
ಭಾರತ- ಅಮೆರಿಕ ನಡುವಿನ ಪರಮಾಣು ಒಪ್ಪಂದವನ್ನು ಜಾರಿಗೊಳಿಸುವ ತವಕದಲ್ಲಿರುವ ಯುಪಿಎ ಸರಕಾರದ ಧೋರಣೆ ಕುರಿತು ಎಡಪಕ್ಷಗಳು ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾರ್ಚ್ 15ರ ಒಳಗೆ ಯುಪಿಎ-ಎಡಪಕ್ಷ ಸಮಿತಿಯ ಸಭೆ ಕರೆಯಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿವೆ.

ಪರಮಾಣು ಒಪ್ಪಂದದ ಬಗ್ಗೆ ಸರಕಾರದ ನಿಲುವು ತಿಳಿಯಲು ಮಾರ್ಚ್ 15ರೊಳಗೆ ತುರ್ತು ಸಭೆ ನಡೆಸುವಂತೆ ಕೋರಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ.

ಗುರುವಾರ ಬೆಳಗ್ಗೆ ಕಾರಟ್‌ರನ್ನು ಭೇಟಿಯಾದ ಸಿಪಿಐ ನಾಯಕ ಮತ್ತು ಸಮಿತಿಯ ಸದಸ್ಯರಾದ ಡಿ ರಾಜಾ, ಎಡ ಪಕ್ಷಗಳ ವಿರೋಧದ ನಡುವೆಯು ಸರಕಾರ ಪರಮಾಣು ಒಪ್ಪಂದಕ್ಕೆ ಒಲವು ತೋರಲು ಯಾವ ನೀತಿ ಅನುಸರಿಸುತ್ತಿದೆ ಎಂಬುದನ್ನು ಚರ್ಚಿಸಿದರು.

ಐಎಇಎ ಜತೆಗಿನ ಭಾರತೀಯ ನಿರ್ದಿಷ್ಟ ಸುರಕ್ಷತಾ ಒಪ್ಪಂದದ ವರದಿಯ ವಿರುದ್ದ ಕಾರಟ್ ಪತ್ರ ಬರೆದಿದ್ದು, ಅವರು ಈ ವಿಚಾರವಾಗಿ ಚರ್ಚೆ ನಡೆಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ

ಅಮೆರಿಕ ಭಾರತಕ್ಕೆ ಅಂತಿಮ ಗಡು ನೀಡಿದ್ದು, ಎಡಪಕ್ಷಗಳೂ ಸರಕಾರಕ್ಕೆ ಅಂತಿಮ ಗಡುವು ನೀಡಲು ಸಜ್ಜಾಗಿವೆ. ಈ ದಿಶೆಯಲ್ಲಿ ಮುಂದಿನ ಯುಪಿಎ-ಎಡಪಕ್ಷ ಸಮಿತಿ ಸಭೆಯು ನಿರ್ಣಾಯಕವಾಗಿರುತ್ತದೆ ಎಂದು ಹಿರಿಯ ಎಡಪಕ್ಷದ ನಾಯಕ ತಿಳಿಸಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ಸರಕಾರಕ್ಕೆ ಐಎಇಎ ಒಪ್ಪಂದವನ್ನು ಪೂರ್ಣಗೊಳಿಸುವ ಅನಿವಾರ್ಯತೆ ಇದ್ದು, ಇದರಿಂದ ಭಾರತಕ್ಕೆ ಪರಮಾಣು ಸರಬರಾಜು ಗುಂಪಿಗೆ ಮುಂದುವರಿಯಲು ಸಾಧ್ಯವಾಗುವುದು.
ಮತ್ತಷ್ಟು
ಮಾರ್ಚ್ 7ರಿಂದ ಗರೀಬ್ ರಥ್ ಓಡಾಟ
ವಾಜಪೇಯಿ 'ರಾಜಕೀಯ ಭೀಷ್ಮ'ನೆಂದ ಪ್ರಧಾನಿ
ರಾಜ್ ಠಾಕ್ರೆಗೆ ಸಿನಿತಾರೆಯರ ಬೆಂಬಲ
ವಿಶ್ವದಲ್ಲೇ 7ನೆ ಕೊಳಕು ನಗರ ಮುಂಬೈ!
ಬಿಹಾರಿಗಳ ಮೇಲೆ ಕೆಂಡ: ಬಾಳ ಠಾಕ್ರೆ ಸರದಿ
ಲಕ್ಷಾಂತರ ಭಕ್ತರಿಂದ ಕಾಶಿವಿಶ್ವನಾಥನ ದರ್ಶನ