ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಹುಲ್ ಗಾಂಧಿಯ 'ಡಿಸ್ಕವರಿ ಇಂಡಿಯಾ' ಆರಂಭ
PIB
ಅವಧಿಗೆ ಮುನ್ನವೇ ಜನತೆಯ ಬಳಿಗೆ ಮತಭಿಕ್ಷೆಗೆ ತೆರಳಲು ಕಾಂಗ್ರೆಸ್ ಸಿದ್ಧವಾಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ತನ್ನ 'ಭಾರತವನ್ನು ತಿಳಿಯುವ' ಪ್ರವಾಸಕ್ಕೆ, ಒರಿಸ್ಸಾದ ಕಡುಬಡತನದ ಪ್ರಾಂತ್ಯಕ್ಕೆ ಭೇಟಿ ನೀಡುವ ಮೂಲಕ ಚಾಲನೆ ನೀಡಿದ್ದಾರೆ.

"ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ" ಕಾಂಗ್ರೆಸ್ ಕಾರ್ಯತಂತ್ರದಂಗವಾಗಿ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಅಭಿಯಾನ, ಒಂದುಕಾಲದಲ್ಲಿ ಹಸಿವಿನಿಂದ ಬಡಜನತೆ ಸಾವಿಗೀಡಾದ ಒರಿಸ್ಸಾದ ಅತ್ಯಂತ ಹಿಂದುಳಿದ ಕೋರಾಪುಟ್, ಬೊಲಾಂಗಿರ್, ಕಾಲಹಂದಿ(ಕೆಬಿಕೆ) ಪ್ರದೇಶಗಳಿಂದ ಆರಂಭಗೊಳ್ಳಲಿದೆ. ರಾಹುಲ್ ಗಾಂಧಿ ಇಲ್ಲಿನ ರೈತರು, ಬುಡಕಟ್ಟು ಜನಾಂಗದವರು, ಬಡಜನತೆ ಮತ್ತು ಯುವಕರನ್ನು ಓಲೈಸುವ ಪ್ರಯತ್ನ ಮಾಡಲಿದ್ದಾರೆ.

"ರಾಹುಲ್‌ಜಿ 13 ಜಿಲ್ಲೆಗಳ ಪ್ರವಾಸದಲ್ಲಿ ಇಲ್ಲಿನ ಜನತೆಗೆ ಕೇಂದ್ರದ ಯುಪಿಯ ಸರಕಾರದ ಸಾಧನೆಗಳು ಮತ್ತು ಒರಿಸ್ಸಾದ ಬಿಜೆಡಿ-ಬಿಜೆಪಿ ಮೈತ್ರಿಯ ಒರಿಸ್ಸಾ ಸರಕಾರದ ವೈಫಲ್ಯಗಳನ್ನು ವಿವರಿಸಲಿದ್ದಾರೆ" ಎಂದು ಒರಿಸ್ಸಾ ಮೇಲ್ವಿಚಾರಣೆಯ ಕೇಂದ್ರ ಸಚಿವ ಅಜಯ್ ಮಕೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೇಂದ್ರದ ಬಜೆಟ್‌ನಲ್ಲಿನ ಜನತಾಸ್ನೇಹಿ ಅಂಶಗಳನ್ನೂ ಸಹ ರಾಹುಲ್ ಜನತೆಗೆ ತಿಳಿಸಬಹುದೆಂದು ನಿರೀಕ್ಷಿಸಲಾಗಿದೆ. ಸಮಾಜದ ಎಲ್ಲಾ ವರ್ಗಗಳ ಜನತೆ, ಮಹಿಳಾ ಸಂಘಟನೆಗಳು, ಎನ್‌ಜಿಓಗಳನ್ನು ಭೇಟಿ ಮಾಡಿ ಅವರ ದುಗುಡ-ದುಮ್ಮಾನ ಹಾಗೂ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಅಲ್ಲದೆ, ನೌಪಾದ್ ಜಿಲ್ಲೆಯ ಜಲಾನಯನ ಪ್ರದೇಶಕ್ಕೂ ಭೇಟಿ ನೀಡಲಿದ್ದಾರೆ.

ರಾಹುಲ್ ಗಾಂಧಿಯ ಒರಿಸ್ಸಾ ಪ್ರವಾಸವು ಅವರ ರಾಷ್ಟ್ರವ್ಯಾಪಿ ಪ್ರವಾಸದ ಭಾಗವಾಗಿದ್ದು, ಈ ತಿಂಗಳ ಉತ್ತರಾರ್ಧದಲ್ಲಿ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.
ಮತ್ತಷ್ಟು
ತುರ್ತು ಸಮನ್ವಯ ಸಮಿತಿ ಸಭೆಗೆ ಎಡ ಪಕ್ಷದ ಆಗ್ರಹ
ಮಾರ್ಚ್ 7ರಿಂದ ಗರೀಬ್ ರಥ್ ಓಡಾಟ
ವಾಜಪೇಯಿ 'ರಾಜಕೀಯ ಭೀಷ್ಮ'ನೆಂದ ಪ್ರಧಾನಿ
ರಾಜ್ ಠಾಕ್ರೆಗೆ ಸಿನಿತಾರೆಯರ ಬೆಂಬಲ
ವಿಶ್ವದಲ್ಲೇ 7ನೆ ಕೊಳಕು ನಗರ ಮುಂಬೈ!
ಬಿಹಾರಿಗಳ ಮೇಲೆ ಕೆಂಡ: ಬಾಳ ಠಾಕ್ರೆ ಸರದಿ