ತ್ರಿಪುರಾ ಹಾಗೂ ಮೇಘಾಲಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ಮತಗಣನೆ ಆರಂಭಗೊಂಡಿದ್ದು, ಆರಂಭಿಕ ಹಂತದಲ್ಲಿ, ತ್ರಿಪುರಾದಲ್ಲಿ ಎಡಪಕ್ಷಗಳು ಮುನ್ನಡೆ ಸಾಧಿಸಿದ್ದರೆ, ಮೇಘಾಲಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷಗಳನ್ನು ಹಿಂದಿಕ್ಕಿದೆ.
ತ್ರಿಪುರಾದಲ್ಲಿ ಆರಂಭಿಕ ಹಂತದಲ್ಲಿ ಎಡಪಕ್ಷಗಳು 16 ಸ್ಥಾನಗಳ ಮುನ್ನಡೆ ಸಾಧಿಸಿವೆ. ಭಾನ್‌ಪುರ ಕ್ಷೇತ್ರದಿಂದ ಸ್ಫರ್ಧಿಸಿರುವ ಮುಖ್ಯಮಂತ್ರಿ ಮಣಿಕ್ ಸರ್ಕಾರ್ ಅವರು ತನ್ನ ಸಮೀಪದ ಪ್ರತಿಸ್ಫರ್ಧಿ ಶಾ ಆಲಂ ಅವರಿಗಿಂತ ಎರಡು ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ. ದಕ್ಷಿಣ ತ್ರಿಪುರದಲ್ಲಿ ಸಿಪಿಐ-ಎಂ ಬಲಿಷ್ಠತೆ ತೋರಿದೆ. ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶಗಳು ಹೊರಬೀಳುವ ಸಾಧ್ಯತೆ ಇದೆ.
ಮೇಘಾಲಯದ ಒಟ್ಟು 60 ಸ್ಥಾನಗಳಲ್ಲಿ, 59 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 18 ಸ್ಥಾನಗಳಲ್ಲಿ ಮುಂದಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಆರು ಸ್ಥಾನಗಳಲ್ಲಿ ಮುಂದಡಿ ಇರಿಸಿದ್ದರೆ, ಯುಡಿಪಿ ಏಳು ಹಾಗೂ ಇತರರು ಒಂಭತ್ತು ಕ್ಷೇತ್ರಗಳಲ್ಲಿ ಮುಂದಿದ್ದಾರೆ.
|