ತ್ರಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಡರಂಗವು ಮೂರನೆ ಎರಡರ ಪ್ರಚಂಡ ಬಹುಮತದಿಂದ ಗೆದ್ದು ಬಂದಿದೆ. ಇದುವರೆಗೆ ಘೋಷಣೆಯಾಗಿರುವ 53 ಸ್ಥಾನಗಳಲ್ಲಿ 44ರಲ್ಲಿ ಎಡಪಕ್ಷಗಳು ಗೆದ್ದಿವೆ. ಸಿಪಿಐ-ಎಂ 41 ಸ್ಥಾನಗಳಲ್ಲಿ ಗೆದ್ದಿದ್ದರೆ, ಅದರ ಪಾಲುದಾರರಾದ ಆರ್.ಎಸ್.ಪಿ ಎರಡು ಮತ್ತು ಸಿಪಿಐ ಒಂದು ಸ್ಥಾನದಲ್ಲಿ ಗೆದ್ದಿದೆ.
ಪ್ರಸ್ತುತ ಸರಕಾರದ ಮಿತ್ರಪಕ್ಷವಾಗಿದ್ದ ಫಾರ್ವರ್ಡ್ ಬ್ಲಾಕ್, ಸಿಪಿಐ-ಎಂನೊಂದಿಗೆ ಸ್ಥಾನ ಹಂಚಿಕೆಯ ಅಸಮಾಧಾನದಿಂದಾಗಿ ಚುನಾವಣೆಯಲ್ಲಿ ಸ್ಫರ್ಧಿಸಿರಲಿಲ್ಲ. ವಿರೋಧ ಪಕ್ಷ ಕಾಂಗ್ರೆಸ್ ಎಂಟು ಸ್ಥಾನಗಳಲ್ಲಿ ಗೆದ್ದಿದ್ದರೆ, ಅದರ ಮಿತ್ರ ಪಕ್ಷ ಐಎನ್‌ಪಿಟಿ ಒಂದು ಸ್ಥಾನವನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲು ಶಕ್ತವಾಗಿದೆ.
ಉಳಿದ ಏಳು ಸ್ಥಾನಗಳಲ್ಲಿ ಎಡರಂಗವು ನಾಲ್ಕು ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್ ಮಿಕ್ಕ ಮೂರು ಸ್ಥಾನಗಳಲ್ಲಿ ಮುಂದಿದೆ. ಹಾಲಿ ಮುಖ್ಯಮಂತ್ರಿ ಮಣಿಕ್ ಸರ್ಕಾರ್ ತನ್ನ ಸಮೀಪದ ಪ್ರತಿಸ್ಫರ್ಧಿಯನ್ನು 2,900 ಮತಗಳಿಂದ ಸೋಲಿಸಿದ್ದಾರೆ.
|