ಮೇಘಾಲಯದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತ ಗಳಿಸದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 59 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 25 ಸ್ಥಾನಗಳನ್ನು ಗೆದ್ದುಕೊಂಡಿದೆ.
ಪ್ರಸ್ತುತ ಮೈತ್ರಿ ಸರಕಾರದ ಮಿತ್ರಪಕ್ಷಗಳ ನೇತೃತ್ವ ಹೊಂದಿರುವ ಕಾಂಗ್ರೆಸ್, ಪಕ್ಷೇತರರು ಮತ್ತು ಇತರ ಎರಡು ಸಣ್ಣ ಪಕ್ಷಗಳಾದ ಪಿಡಿಪಿ ಮತ್ತು ಕೆಎಚ್ಎನ್ಎಎಂಯನ್ನು ಜತೆಯಾಗಿಸಿಕೊಂಡು ಸರಕಾರ ರಚಿಸಬಹುದಾಗಿದೆ ಎಂದು ಚುನಾವಣಾ ವಿಶ್ಲೇಷಕರು ಹೇಳಿದ್ದಾರೆ.
ಮಾಜಿ ಲೋಕಸಭಾ ಸ್ಪೀಕರ್ ನೇತೃತ್ವದ ಎನ್‌ಸಿಪಿಯು 14 ಸ್ಥಾನಗಳನ್ನು ಗಳಿಸಿದ್ದರೆ, ಯುಡಿಪಿ 11, ಎಚ್ಎಸ್‌ಪಿಡಿಪಿ ಎರಡು ಮತ್ತು ಕೆಎಚ್ಎನ್ಎಎಂ ಹಾಗೂ ಬಿಜೆಪಿ ತಲಾ ಒಂದು ಸ್ಥಾನಗಳನ್ನು ಗಳಿಸಿವೆ. ಪಕ್ಷೇತರರು ಐದು ಸ್ಥಾನಗಳನ್ನು ಗೆದ್ದಿದ್ದಾರೆ.
|