ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇಹುಗಾರಿಕೆ ಮಾಡಿದ್ದು ಹೌದು: ಕಾಶ್ಮೀರ್ ಸಿಂಗ್
PTI
ಮೂವತ್ತೈದು ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿದ್ದು, ಸೋಮವಾರ ಬಿಡುಗಡೆಗೊಂಡ ಹೋಶಿಯಾರ್‌ಪುರದ ಕಾಶ್ಮೀರ್ ಸಿಂಗ್ ತಾನು ಬೇಹುಗಾರನಾಗಿದ್ದುದು ಹೌದು ಎಂದು ಶುಕ್ರವಾರ ಒಪ್ಪಿಕೊಂಡಿದ್ದು, ತಾನು ರಾಷ್ಟ್ರಕ್ಕೆ ಉತ್ತಮ ಸೇವೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಆದರೆ, ಕೇಂದ್ರದಲ್ಲಿರುವ ಸರಕಾರಗಳು ತನ್ನ ಕುಟುಂಬಕ್ಕಾಗಿ ಏನೂ ಮಾಡಿಲ್ಲ ಎಂದು ದೂರಿದ್ದಾರೆ.

"1974ರಲ್ಲಿ ತನ್ನ ಬಂಧನದ ಬಳಿಕ ಅಧಿಕಾರದಲ್ಲಿದ್ದ ಎಲ್ಲಾ ಸರಕಾರಗಳು ನನ್ನ ಕುಟುಂಬಕ್ಕೆ ಏನೂ ಮಾಡಿಲ್ಲ. ನನಗೊಪ್ಪಿಸಿದ ಕೆಲಸವನ್ನು ನಾನು ಮಾಡಿದ್ದೇನೆ. ಆದರೆ ನನ್ನ ಬಂಧನದ ಬಳಿಕ ಸರಕಾರ ಒಂದು ಪೈಸೆಯನ್ನು ವ್ಯಯಿಸಲಿಲ್ಲ" ಎಂಬುದಾಗಿ ಆರೋಪಿಸಿದರು.

ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಕೊಳೆಯುತ್ತಿರುವ ಯಾವುದೇ ಕೈದಿಯ ಬಿಡುಗಡೆಗೆ ಕೇಂದ್ರದಲ್ಲಿದ್ದ ವಿವಿಧ ಸರಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನುಡಿದ 67ರ ಹರೆಯದ ಕಾಶ್ಮೀರ್ ಸಿಂಗ್ ದೇವರ ದಯೆಯಿಂದ ತಾನು ಮರಣದಂಡನೆಯಿಂದ ಪಾರಾಗಿ ಬಿಡುಗಡೆಗೊಂಡಿದ್ದೇನೆ ಎಂದು ದೇವರಿಗೆ ಕೃತಜ್ಞತೆ ಸಲ್ಲಿಸಿದರು.

"ನನ್ನ ಬಂಧನದ ಬಳಿಕ ಸರಕಾರ ನನ್ನ ಕುಟಂಬದ ಕಾಳಜಿ ವಹಿಸಿಲ್ಲ. ಸರಕಾರ ಕೇವಲ ಕಾಗದಪತ್ರದ ಕೆಲಸ ಮಾತ್ರ ಮಾಡುತ್ತಿದೆ" ಎಂದು ಕಾಶ್ಮೀರ್ ಸಿಂಗ್ ದೂರಿದರು.
ಮತ್ತಷ್ಟು
ಮೇಘಾಲಯ: ಯಾರಿಗೂ ಬಹುಮತವಿಲ್ಲ
ತ್ರಿಪುರ: ಎಡರಂಗಕ್ಕೆ ಪ್ರಚಂಡ ಬಹುಮತ
ಮೂಲಭೂತವಾದಿಗಳಿಂದ ಅಲ್ಪಸಂಖ್ಯಾತರನ್ನು ರಕ್ಷಿಸಿ: ಪ್ರಣಬ್
ತ್ರಿಪುರಾ-ಎಡ; ಮೇಘಾಲಯ-ಕಾಂಗ್ರೆಸ್ ಮುನ್ನಡೆ
ರಾಹುಲ್ ಗಾಂಧಿಯ 'ಡಿಸ್ಕವರಿ ಇಂಡಿಯಾ' ಆರಂಭ
ತುರ್ತು ಸಮನ್ವಯ ಸಮಿತಿ ಸಭೆಗೆ ಎಡ ಪಕ್ಷದ ಆಗ್ರಹ