ತ್ರಿಪುರ ರಾಜ್ಯದ ಮುಖ್ಯಮಂತ್ರಿಯಾಗಿ ಸಿಪಿಐ(ಎಂ) ಮುಖಂಡ ಮಾಣಿಕ್ ಸರ್ಕಾರ್ ಸತತ ನಾಲ್ಕನೇಯ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ.
ರಾಜ್‌ಭವನದಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರ್ ಸಂಪುಟದಲ್ಲಿ 12 ಸಚಿವರು ಅಧಿಕಾರ ಸ್ವೀಕರಿಸಿದ್ದು 10 ಸಚಿವರು ಸಿಪಿಐ(ಎಂ)ಗೆ ಸೇರಿದ್ದು ಉಳಿದ ಇಬ್ಬರು ಸಚಿವರು ಆರ್‌ಎಸ್‌ಪಿ ಹಾಗೂ ಸಿಪಿಐಗೆ ಸೇರಿದವರಾಗಿದ್ದಾರೆ.
60 ಸದಸ್ಯ ಬಲದ ವಿಧಾನಸಭೆಯಲ್ಲಿ 49 ಸೀಟುಗಳನ್ನು ಗೆಲ್ಲುವ ಮೂಲಕ ಸತತ ನಾಲ್ಕನೇಯ ಅವಧಿಗೆ ಸಿಪಿಐ(ಎಂ) ಪಕ್ಷ ಭಾರಿ ಗೆಲುವನ್ನು ಸಾಧಿಸಿದೆ.
ಕಾಂಗ್ರೆಸ್ ಕೇವಲ 10 ಸೀಟುಗಳಲ್ಲಿ ಗೆಲುವು ಸಾಧಿಸಿದ್ದು ಅದರ ಮಿತ್ರಪಕ್ಷವಾದ ನ್ಯಾಷನಲೀಸ್ಟ್ ಪಾರ್ಟಿ ಆಫ್ ತ್ರಿಪುರ ಕೇವಲ ಒಂದು ಸೀಟುಗಳಲ್ಲಿ ಗೆಲುವು ಸಾಧಿಸಿದೆ.
58ರ ಹರೆಯದ ಮಾಣಿಕ್ ಸರ್ಕಾರ್ 1967ರಲ್ಲಿ ರಾಜಕೀಯ ಜೀವನವನ್ನು ಆರಂಭಿಸಿದ್ದು, 1968ರಲ್ಲಿ ಸಿಪಿಐ(ಎಂ) ಸದಸ್ಯತ್ವವನ್ನು ಪಡೆದಿದ್ದರು.
|