ಕಾಂಗ್ರೆಸ್ ನೇತ್ರತ್ವದ ಯುಪಿಎ ಸರಕಾರ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ ಎಂದು ಫಾರ್ವರ್ಡ್ ಬ್ಲಾಕ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಸತ್ ಸದಸ್ಯರಾದ ದಿಬೋಬ್ರತ್ ಹೇಳಿದ್ದಾರೆ.
ಯುಪಿಎ ಮೈತ್ರಿಕೂಟದ ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಮರೆತಿದ್ದು, ಯುಪಿಎ ಸರಕಾರದ ಆರ್ಥಿಕ ನೀತಿಗಳಲ್ಲಿ ಜನಸಾಮಾನ್ಯರ ಹಿತವಾಗಲಿ ರಾಷ್ಟ್ರದ ಹಿತವಾಗಲಿ ಕಂಡುಬರುತ್ತಿಲ್ಲ. ಆದ್ದರಿಂದ ಕಾಂಗ್ರೆಸ್ ನೇತ್ರತ್ವದ ಯುಪಿಎ ಸರಕಾರ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ ಎಂದು ಬಿಸ್ವಾಸ್ ಹೇಳಿದರು.
ತೇಹಸೀಲ್ ಜಿಲ್ಲೆಯ ಸಿವಾನಿ ಮತ್ತು ಬೇಗಂಗಂಜ್ ಪಟ್ಟಣಗಳಲ್ಲಿ ಬುಡಕಟ್ಟು ಮತದಾರರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ಯಾವುದೇ ಬದಲಾವಣೆಗಳಿಲ್ಲ ಎಂದು ಟೀಕಿಸಿದ್ದಾರೆ
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆ ಹೇಳಿಕೆ ಕೇವಲ ಸಮಾಜವನ್ನು ಒಡೆದು ಆಳುವ ನೀತಿ ರಾಜಕೀಯ ಪ್ರೇರಿತವಾದುದ್ದು ಎಂದು ಹೇಳಿದ್ದಾರೆ.
|