ಭಯೋತ್ಪಾದನೆ ನಿಗ್ರಹಕ್ಕಾಗಿ ಸರಕಾರ ಪ್ಯಾರಾಮಿಲಿಟರಿ ದಳಗಳನ್ನು ಹೆಚ್ಚಿಸುತ್ತಿದ್ದು ನೂತನ ತಂತ್ರಜ್ಞಾನವನ್ನು ಉಗ್ರರ ನಿಗ್ರಹಕ್ಕಾಗಿ ಬಳಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ಸಲಹೆ ನೀಡಿದ್ದಾರೆ.
ದೇಶದ ಭದ್ರತಾ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ಪ್ಯಾರಾಮಿಲಿಟರಿ ಬಲವನ್ನು ಹೆಚ್ಚಿಸಿ ನೂತನ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಭಯೋತ್ಪಾದನೆಯನ್ನು ನಿಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
ಭಯೋತ್ಪಾದಕರು ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಯನ್ನು ಕುಠಿತಗೊಳಿಸಲು ಪ್ರಯತ್ನಿಸುತ್ತಿದ್ದು, ಭಯೋತ್ಪಾದನೆ ನಿಗ್ರಹದಳಗಳು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿದ್ದಲ್ಲಿ ಶತ್ರುಗಳ ವಿರುದ್ದದ ಹೋರಾಟದಲ್ಲಿ ಜಯಗಳಿಸಲು ಸಾಧ್ಯವಿಲ್ಲ ಎಂದು ಕೇಂದ್ರಭದ್ರತಾ ದಳ ಆಯೋಜಿಸಿದ ಸಮಾರಂಭದಲ್ಲಿ ಪಾಟೀಲ್ ತಿಳಿಸಿದ್ದಾರೆ.
ಪ್ಯಾರಾಮಿಲಿಟರಿ ಬಲಗಳಿಗೆ ಅಗತ್ಯವಿರುವುದನ್ನು ಒದಗಿಸಿ ಸಬಲತೆಯನ್ನು ನೀಡಲು ಸರಕಾರ ಸಿದ್ದವಾಗಿದೆ ಎಂದು ಗೃಹ ಸಚಿವ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
|