ನಿಗದಿತ ಅವಧಿಗಿಂತ ಮುಂಚೆ ಲೋಕಸಭಾ ಚುನಾವಣೆಗಳು ನಡೆಯುವುದಿಲ್ಲವೆಂದು ಲೋಕಸಭಾ ಸದಸ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ನನಗೆ ತಿಳಿದ ಮಟ್ಟಿಗೆ ಸದ್ಯಕ್ಕೆ ಲೋಕಸಭಾ ಚುನಾವಣೆಗಳು ನಡೆಯುವುದಿಲ್ಲವಾದ್ದರಿಂದ ನಿಗದಿತ ಅವಧಿಗೆ ಮುಂಚೆ ಚುನಾವಣೆಗಳ ಮಾತನ್ನು ಆಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಭಾರತ-ಅಮೆರಿಕ ಪರಮಾಣು ಒಪ್ಪಂದ ಕುರಿತಂತೆ ಕೇಂದ್ರದ ಯುಪಿಎ ಸರಕಾರ ಮಿತ್ರಪಕ್ಷಗಳೊಂದಿಗೆ ಮಾತುಕತೆ ನಡೆಸಿದೆ. ಎಡಪಕ್ಷಗಳ ನಿಲುವನ್ನು ತೆಗೆದುಕೊಂಡು ಮುಂದುವರೆಯಲಾಗುವುದು ಎಂದು ಹೇಳಿದರು
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬೆಂಬಲಿತ ಪಕ್ಷಗಳೊಂದಿಗೆ ಚರ್ಚಿಸಿದ ನಂತರ ನಿರ್ಧರಿಸಲಾಗುವುದು ಎಂದು ಪ್ರಧಾನಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
|