ಕೇವಲ ಎರಡು ತಿಂಗಳ ಹಿಂದೆಯಷ್ಟೇ ಹಕ್ಕಿ ಜ್ವರದ ಕುಕ್ಕುಟ ಸಂಹಾರ ಕಾರ್ಯವನ್ನು ಪೂರೈಸಿದ್ದ ಪಶ್ಚಿಮ ಬಂಗಾಲ ಸರಕಾರವು ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಕಾರಣ ಸರಕಾರ ಪುನಃ ಕುಕ್ಕುಟ ಸಂಹಾರವನ್ನು ಕೈಗೆತ್ತಿಕೊಂಡಿದೆ.
ಅಂತರದವರೆಗೆ ಇರುವ ಎಲ್ಲ ಕೋಳಿಗಳನ್ನು ಸಂಹಾರ ಮಾಡಲಾಗುವುದು. ಈಗಾಗಲೇ ರಘುನಾಥ್ ಗಂಜ್ II ಜಿಲ್ಲೆಯಲ್ಲಿ 22, 400 ಕೋಳಿಗಳ ವಧೆ ಮಾಡಲಾಗಿದೆ. ಜಿಯಾಗಂಜ್ ಜಿಲ್ಲೆಯಲ್ಲಿ 27, 200 ಕೋಳಿಗಳನ್ನು ಸಾಯಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಹೇಳಿದೆ.
ಜಿಯಾಗಂಜ್ ಮತ್ತು ರಘುನಾಥ್ II ಪ್ರದೇಶಗಳಲ್ಲಿ ಈಗಾಗಲೇ 70 ತಂಡಗಳನ್ನು ಸಂಹಾರಕ್ಕೆ ನಿಯೋಜಿಸಲಾಗಿದೆ. ಎಂದು ಇಲಾಖೆ ಸ್ಫಷ್ಟಪಡಿಸಿದ್ದು, ಎಚ್ಎನ್ 5 ವೈರಸ್ ಹೊರತಾಗಿ ಇನ್ನಾವುದೇ ಮಾರಕ ಸೋಂಕು ಹರಡಬಹುದಾದ ರೋಗಾಣುಗಳು ಪತ್ತೆಯಾಗಿಲ್ಲ ಎಂದು ಪುಣೆಯಲ್ಲಿನ ಪ್ರಯೋಗಾಲಯ ಹೇಳಿದೆ.
|