ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಘಾಲಯ: ಲಪಂಗ್ ಅಧಿಕಾರ ಸ್ವೀಕಾರ
ಇತ್ತೀಚೆಗೆ ಮೇಘಾಲಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ಸ್ಥಿತಿ ವಿಧಾನ ಸಭೆಯ ನಡುವೆ ಡಿ. ಡಿ. ಲಪಂಗ್ ಮುಖ್ಯ ಮಂತ್ರಿ ಪದವಿಗೆ ಏರುವಲ್ಲಿ ಸಫಲರಾಗಿದ್ದಾರೆ. ಅತಿ ಹೆಚ್ಚು ಶಾಸಕರನ್ನು ಕಾಂಗ್ರೆಸ್ ಹೊಂದಿದ್ದರೂ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಇರುವ ಎನ್‌ಸಿಪಿ ನಾಯಕ ಪಿ. ಎ ಸಂಗ್ಮಾ, ಇತರ ಪಕ್ಷಗಳು ಮತ್ತು ಪಕ್ಷೇತರರು ಸೇರಿದಂತೆ 32 ಸದಸ್ಯ ಬಲವನ್ನು ಹೊಂದಿದ್ದಾರೆ.

ಇದೀಗ ಮುಖ್ಯಮಂತ್ರಿ ಗದ್ದುಗೆ ಏರುವಲ್ಲಿ, ಹರಸಾಹಸ ಮಾಡಿರುವ ರಾಜಕೀಯ ಪಕ್ಷಗಳ ಮೇಲಾಟದಲ್ಲಿ, ಕಾಂಗ್ರೆಸ್ ಸಿಎಂ ಪಟ್ಟಕ್ಕೆ ಏರುವಲ್ಲಿ ಸಫಲವಾಗಿದ್ದು, ಅದರ ನಾಯಕ ಡಿ.ಡಿ.ಲಪಂಗ್ ಸೋಮವಾರ ಸಂಜೆ ಪ್ರಮಾಣ ಸ್ವೀಕರಿಸಿದರು.

ತಮ್ಮ ಮೈತ್ರಿಕೂಟ 30ಸದಸ್ಯರನ್ನು ಹೊಂದಿದೆ ಎಂದು ವಾದಿಸಿದ್ದ ಎನ್‌‌ಸಿಪಿ ನಾಯಕ ಪಿ.ಎ.ಸಂಗ್ಮಾ, ರಾಜ್ಯಪಾಲ ಎಸ್.ಎಸ್.ಸಿಧು ಎದುರು ಪರೇಡ್ ಮಾಡಿಸಿದ್ದರು.

ಆದರೆ ಬಳಿಕ ಕಾಂಗ್ರೆಸ್‌‌ಗೆ ರಾಜ್ಯಪಾಲರು ಆಹ್ವಾನ ನೀಡಿ, 11ದಿನದೊಳಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದರು. 60 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 25ಸ್ಥಾನಗಳನ್ನು ಹೊಂದಿದೆ. ಎನ್‌‌ಸಿಪಿ ಮೈತ್ರಿಕೂಟದಲ್ಲಿ ಎನ್‌‌ಸಿಪಿ 14, ಯುಡಿಪಿಯ 11, ಎಚ್‌‌ಎಸ್ಪಿಡಿಪಿಯ 2,ಕೆಎಚ್‌‌ಎನ್‌‌ಎಎಂ ಮತ್ತು ಬಿಜೆಪಿಯ ತಲಾ ಒಬ್ಬೊಬ್ಬ ಸದಸ್ಯರು ಸೇರಿದ್ದಾರೆ. ಉಳಿದ 5ಮಂದಿ ಪಕ್ಷೇತರರಾಗಿದ್ದಾರೆ.

ಇನ್ನೂ ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ, ಆದರೆ ಲಪಂಗ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ, ರಾಜ್ಯಪಾಲರ ನಿರ್ಧಾರದ ವಿರುದ್ಧ ಸರ್ವೊಚ್ಚನ್ಯಾಯಾಲಯದ ಮೆಟ್ಟಿಲೇರುವುದಾಗಿ ವಿರೋಧಪಕ್ಷ ತಿಳಿಸಿದೆ.
ಮತ್ತಷ್ಟು
ಪ. ಬಂಗಾಲದಲ್ಲಿ ಪುನಃ ಕುಕ್ಕುಟ ಸಂಹಾರ ಯಜ್ಞ
ಅವಧಿಗೆ ಮುಂಚೆ ಚುನಾವಣೆ ಇಲ್ಲ-ಗಾಂಧಿ
ತಂತ್ರಜ್ಞಾನವನ್ನು ಶಕ್ತಿಯಾಗಿ ಬಳಸಿಕೊಳ್ಳಿ-ಪಾಟೀಲ್
ಯುಪಿಎ ಸರಕಾರ ಅವಸಾನದತ್ತ
ಮುಖ್ಯಮಂತ್ರಿಯಾಗಿ ಮಾಣಿಕ್ ಸರ್ಕಾರ್ ಅಧಿಕಾರ ಸ್ವೀಕಾರ
ಅನಿಶ್ಚತತೆಯಲ್ಲಿ ಇಂಡೋ-ಯುಎಸ್ ನಾಗರಿಕ ಅಣು ಒಪ್ಪಂದ