ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಬ್ದುಲ್ ಕಲಾಂರಿಗೆ ಈಗಲೂ ಬಿಡುವೇ ಇಲ್ಲ!
PTI
ಕ್ಷಿಪಣಿ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದಲ್ ಕಲಾಂ ಅವರಿಗೆ ನಿವೃತ್ತಿಯೇ ಇಲ್ಲ. ದೇಶದ ಅತ್ಯುನ್ನತ ಪದವಿಯಲ್ಲಿರುವಾಗ ಇದ್ದಂತೆಯೇ ಅವರಿಗೆ ಈಗಲೂ ಬಿಡುವೆಂಬುದು ಇಲ್ಲವೇ ಇಲ್ಲ.

ಈ ಉಪನ್ಯಾಸ ಪ್ರಿಯ ಮಾಜಿ ರಾಷ್ಟ್ರಪತಿ, ದೇಶದ ಪ್ರಖ್ಯಾತ ವಿಶ್ವವಿದ್ಯಾನಿಲಯ, ಐಐಟಿ-ಐಐಎಂನ ಅತಿಥಿ ಉಪನ್ಯಾಸಕರು. ಇದಲ್ಲದೆ ಅನೇಕ ಸಮಾವೇಶ, ಸಮ್ಮೇಳನಗಳಲ್ಲಿ ಭಾಗವಹಿಸಿ ಬಡತನ ಹಾಗೂ ಪ್ರಚಲಿತ ಸಮಸ್ಯೆಗಳ ಬಗ್ಗೆ ಹೊಸಮಾದರಿಯ ವಾದ ಮಂಡಿಸಿದ್ದಾರೆ.

ಇವರಿಗೆ ಈಗ ಐವರು ಸಹಾಯಕರು. ಇವರಲ್ಲಿ ಇಬ್ಬರ ಜವಾಬ್ದಾರಿ ಎಂದರೆ, ಇವರಿಗೆ ಹರಿದು ಬರುವ ಭರಪೂರ ಆಹ್ವಾನಗಳಲ್ಲಿ ಕಲಾಂ ಯಾವ ಸಭೆಯಲ್ಲಿ ಭಾಗವಹಿಸಬೇಕು ಎಂಬ ಆಯ್ಕೆಗೆ ನೆರವಾಗುವುದು. ಉಳಿದವರು ಕಲಾಂ ಭಾಗವಹಿಸುವ ಸಭೆ ಸಮಾರಂಭಗಳ ಭಾಷಣ ತಯಾರಿಗೆ ಸಂಶೋಧನಾ ಸರಕು ಒದಗಿಸುವ ಕಾರ್ಯದಲ್ಲಿ ನಿರತರು.

ಕಲಾಂ ಅವರು ರಾತ್ರಿ ಒಂದುಗಂಟೆಯ ತನಕ ಯೂವುದಾದರೂ ಕಾರ್ಯದಲ್ಲಿ ನಿರತವಾಗಿರುತ್ತಾರಂತೆ. ಮುಂಜಾನೆ ಆರಕ್ಕೆ ಏಳುವ ಅವರ ದಿನಚರಿ ಪ್ರಾರ್ಥನೆಯೊಂದಿಗೆ ಆರಂಭ. ಬಳಿಕ ಒಂದು ಗಂಟೆ ವಾಕ್. ಅದಾದ ಬಳಿಕ ಸ್ನಾನ ವಿಧಿವಿಧಾನ ಪೂರೈಸಿ ಇ-ಮೇಲ್‌ಗಳನ್ನು ನೋಡುತ್ತಾರೆ. ಬಳಿಕ ತಮ್ಮ ಅಂದಿನ ಕಾರ್ಯಕ್ರಮ ಪಟ್ಟಿಯಂತೆ ಸಿದ್ಧವಾಗುತ್ತಾರಂತೆ ಚಟುವಟಿಕೆಯ ಚೈತನ್ಯದ ಚಿಲುಮೆ ಕಲಾಂ.

ರಾಷ್ಟ್ರಪತಿ ಹುದ್ದೆಯ ನಿವೃತ್ತಿ ಬಳಿಕ ಅವರು 11 ರಾಜ್ಯ ಸುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್, ಇಸ್ರೇಲ್ ಸೇರಿದಂತೆ ಆರು ದೇಶಗಳಿಗೆ ಭೇಟಿ ನೀಡಿದ್ದಾರೆ.
ಮತ್ತಷ್ಟು
ಮೇಘಾಲಯ: ಲಫಾಂಗ್ ಅಧಿಕಾರ ಸ್ವೀಕಾರ
ಪ. ಬಂಗಾಲದಲ್ಲಿ ಪುನಃ ಕುಕ್ಕುಟ ಸಂಹಾರ ಯಜ್ಞ
ಅವಧಿಗೆ ಮುಂಚೆ ಚುನಾವಣೆ ಇಲ್ಲ-ಗಾಂಧಿ
ತಂತ್ರಜ್ಞಾನವನ್ನು ಶಕ್ತಿಯಾಗಿ ಬಳಸಿಕೊಳ್ಳಿ-ಪಾಟೀಲ್
ಯುಪಿಎ ಸರಕಾರ ಅವಸಾನದತ್ತ
ಮುಖ್ಯಮಂತ್ರಿಯಾಗಿ ಮಾಣಿಕ್ ಸರ್ಕಾರ್ ಅಧಿಕಾರ ಸ್ವೀಕಾರ