ಮುಂಬರುವ ರಾಜ್ಯ ಚುನಾವಣೆಗಳಿಗೆ ಸಿದ್ಧವಾಗಿರುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸದಿಗೆ ಕರೆ ನೀಡಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪಕ್ಷದ ಧನಾತ್ಮಕ ಅಂಶಗಳನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯಲು ಕಾಂಗ್ರೆಸಿಗರನ್ನು ಒತ್ತಾಯಿಸಿದರು.
ತನ್ನ ಭಾಷಣದುದ್ದಕ್ಕೂ ಯುಪಿಎ ಸರಕಾರ ಮಂಡಿಸಿದ ಬಜೆಟ್ ಅಂಶಗಳನ್ನು ಕಾಂಗ್ರೆಸ್ ಅಧ್ಯಕ್ಷೆ ಎದ್ದುಗಾಣಿಸಿದರು. 2008-09ರ ಮುಂಗಡಪತ್ರದ ಧನಾತ್ಮಕ ಅಂಶಗಳನ್ನು ಜನತೆಯತ್ತ ಒಯ್ಯಬೇಕು ಎಂದು ನುಡಿದರು.
ತಳಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸಬೇಕು ಎಂದು ನುಡಿದ ಅವರು ಒಗ್ಗಟ್ಟು ಮತ್ತು ಶಿಸ್ತನ್ನು ಪ್ರದರ್ಶಿಸುವಂತೆ ಸಂಸದರನ್ನು ವಿನಂತಿಸಿದರು. ನಾವು ಅಭ್ಯರ್ಥಿಗಳನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಬೇಕಿದೆ, ಇದಕ್ಕಾಗಿ ನಾವು ಶಿಸ್ತು ಮತ್ತು ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎಂದು ಅವರು ಒತ್ತಿ ಹೇಳಿದರು.
|