ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.33 ಮೀಸಲಾತಿಗೆ ಎನ್‌ಸಿ ಸಿದ್ಧ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ತಮ್ಮ ಪಕ್ಷವು ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ) ಮುಖಂಡ ಡಾ| ಫಾರೂಕ್ ಅಬ್ದುಲ್ಲ ಹೇಳಿದ್ದಾರೆ.

"ಚುನಾವಣಾ ಪ್ರಣಾಳಿಕೆಯಲ್ಲಿ ಯುವಕರಂತೆ ರಾಜ್ಯದ ಮಹಿಳೆಯರ ಕುರಿತೂ ಕಾಳಜಿ ವಹಿಸಲಾಗುವುದು ಎಂದು ನುಡಿದ ಅವರು, ಮಹಿಳೆಯರ ಉನ್ನತಿಗೆ ಹಲವು ಕ್ರಾಂತಿಕಾರಿ ಕ್ರಮಗಳ ಅವಶ್ಯಕತೆ ಇದೆ" ಎಂದು ಪ್ರತಿಪಾದಿಸಿದರು.

ಎನ್‌ಸಿ ಅಧಿಕಾರಕ್ಕೆ ಬಂದರೆ, ವಿವಿಧ ರಂಗಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವುದಾಗಿ ಅವರು ಭರವಸೆ ನೀಡಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ ಪಕ್ಷದ ಮಹಿಳಾ ಘಟಕವು ಪಕ್ಷದ ಮುಖ್ಯಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಫಾರೂಕ್ ಮಾತನಾಡುತ್ತಿದ್ದರು.

ಇದಲ್ಲದೆ, ಸಾಯಂಕಾಲಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುವವರಿಗೆ ಸರಕಾರವು 1,500-2000 ರೂಪಾಯಿಗಳನ್ನು ನೀಡಲಿದೆ ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.
ಮತ್ತಷ್ಟು
ಚುನಾವಣೆಗೆ ಸಿದ್ಧರಾಗಲು ಸಂಸದರಿಗೆ ಸೂಚನೆ
ಅಬ್ದುಲ್ ಕಲಾಂರಿಗೆ ಈಗಲೂ ಬಿಡುವೇ ಇಲ್ಲ!
ಮೇಘಾಲಯ: ಲಪಂಗ್ ಅಧಿಕಾರ ಸ್ವೀಕಾರ
ಪ. ಬಂಗಾಲದಲ್ಲಿ ಪುನಃ ಕುಕ್ಕುಟ ಸಂಹಾರ ಯಜ್ಞ
ಅವಧಿಗೆ ಮುಂಚೆ ಚುನಾವಣೆ ಇಲ್ಲ-ಗಾಂಧಿ
ತಂತ್ರಜ್ಞಾನವನ್ನು ಶಕ್ತಿಯಾಗಿ ಬಳಸಿಕೊಳ್ಳಿ-ಪಾಟೀಲ್