ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಕ್ಕಳ ವಿರುದ್ಧ ಅಪರಾಧ ತಡೆಗೆ ಕಠಿಣ ಕ್ರಮ
ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರಕಾರವು ಈ ಸಮಸ್ಯೆಗಳ ಕುರಿತು ವ್ಯವಹರಿಸುವ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸುವ ಆಲೋಚನೆ ಮಾಡಿದೆ.

"ಮಕ್ಕಳ ದೌರ್ಜನ್ಯದ ವಿರುದ್ಧದ ಕಾನೂನುಗಳನ್ನು ಬದಲಿಸಬೇಕಾದ ಅವಶ್ಯಕತೆ ಇದ್ದು, ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪರಿಗಣಿಸಿದೆ" ಎಂದು ಗೃಹಸಚಿವ ಶಿವರಾಜ್ ಪಾಟೀಲ್ ಲೋಕಸಭೆಯಲ್ಲಿ ಹೇಳಿದ್ದಾರೆ.

ಮಕ್ಕಳ ವಿರುದ್ಧದ ದೌರ್ಜನ್ಯಗಳಲ್ಲಿ ಶೇ.75ರಷ್ಟು ನಾಲ್ಕರಿಂದ ಐದು ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ ಎಂದು ಪಾಟೀಲ್ ನುಡಿದರು. 2006ರಲ್ಲಿ 18,967 ಇಂತಹ ಪ್ರಕರಣಗಳು ದಾಖಲಾಗಿವೆ ಎಂಬ ಅಂಕಿ ಅಂಶಗಳನ್ನು ಅವರು ಒದಗಿಸಿದರು. ಮಧ್ಯಪ್ರದೇಶದಲ್ಲಿ ಅತಿಹೆಚ್ಚು 3,939 ಪ್ರಕರಣಗಳು ದಾಖಲಾಗಿದ್ದರೆ, ಮಹಾರಾಷ್ಟ್ರ ಎರಡನೆ ಸ್ಥಾನದಲ್ಲಿದ್ದು 2,841ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಇಂತಹ 2,160 ಪ್ರಕರಣಗಳು ಸಂಭವಿಸಿದ್ದು ತೃತೀಯ ಸ್ಥಾನದಲ್ಲಿದೆ. ನಿತಾರಿ ಹತ್ಯಾಕಾಂಡ ಕುಖ್ಯಾತಿ ಹೊಂದಿರುವ ಉತ್ತರಪ್ರದೇಶದಲ್ಲಿ 1,767 ಪ್ರಕರಣಗಳು ನಡೆದಿದ್ದರೆ, ಆಂಧ್ರಪ್ರದೇಶದಲ್ಲಿ 1,386 ಪ್ರಕರಣಗಳು ದಾಖಲಾಗಿವೆ.

ಸರಕಾರಗಳು, ಸರಕಾರೇತರ ಸಂಸ್ಥೆಗಳು, ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ವಿರುದ್ಧ ಅಪರಾಧ ತಡೆಗೆ ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಾಟೀಲ್ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ರಾಷ್ಟ್ರದಲ್ಲಿ ಶೇ.80ರಷ್ಟು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂಬ ವರದಿಯನ್ನು ಅಲ್ಲಗಳೆದರು.
ಮತ್ತಷ್ಟು
ಶೇ.33 ಮೀಸಲಾತಿಗೆ ಎನ್‌ಸಿ ಸಿದ್ಧ
ಚುನಾವಣೆಗೆ ಸಿದ್ಧರಾಗಲು ಸಂಸದರಿಗೆ ಸೂಚನೆ
ಅಬ್ದುಲ್ ಕಲಾಂರಿಗೆ ಈಗಲೂ ಬಿಡುವೇ ಇಲ್ಲ!
ಮೇಘಾಲಯ: ಲಪಂಗ್ ಅಧಿಕಾರ ಸ್ವೀಕಾರ
ಪ. ಬಂಗಾಲದಲ್ಲಿ ಪುನಃ ಕುಕ್ಕುಟ ಸಂಹಾರ ಯಜ್ಞ
ಅವಧಿಗೆ ಮುಂಚೆ ಚುನಾವಣೆ ಇಲ್ಲ-ಗಾಂಧಿ