ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಸಿಬ್ಬಂದಿಗಳ ರಾಷ್ಟ್ರವ್ಯಾಪಿ ಮುಷ್ಕರ ಆರಂಭ
PTI
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿಗಳು ಮಂಗಳವಾರ ಮಧ್ಯರಾತ್ರಿಯಿಂದಲೇ ಅಸಹಕಾರ ಚಳುವಳಿ ಆರಂಭಿಸಿದ್ದಾರೆ. ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆರಂಭದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಹೈದರಾಬಾದಿನ ಹಳೆಯ ವಿಮಾನ ನಿಲ್ದಾಣಗಳನ್ನು ಮುಚ್ಚಬಾರದು ಎಂಬುದಾಗಿ ಒತ್ತಾಯಿಸಿ ಸಿಬ್ಬಂದಿಗಳು ರಾಷ್ಟ್ರವ್ಯಾಪಿ ಮುಷ್ಕರ ಹೂಡಿದ್ದಾರೆ. ಮುಷ್ಕರದಿಂದಾಗಿ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ದೊಡ್ಡಮಟ್ಟದ ಪರಿಣಾಮ ಉಂಟಾಗಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ನಾಗರಿಕ ವಾಯುಯಾನ ಸಚಿವಾಲಯ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿಗಳ ನಡುವಿನ ಮಾತುಕತೆ ವಿಫಲವಾದ ಕಾರಣ ಸಿಬ್ಬಂದಿಗಳು ಮುಷ್ಕರಕ್ಕಿಳಿದಿದ್ದಾರೆ. ಮುಷ್ಕರದಿಂದಾಗಿ ದೇಶಿಯ ಇಲ್ಲವೇ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂಬ ಸೂಚನೆಗಳನ್ನು ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳು ನೀಡಿವೆ.

ಹೈದರಾಬಾದ್ ಹಾಗೂ ಬೆಂಗಳೂರಿನ ವಿಮಾನ ಹಳೆ ನಿಲ್ದಾಣಗಳನ್ನು ಮುಚ್ಚುವ ಪ್ರಸ್ತಾಪವನ್ನು ವಿರೋಧಿಸಿ ಸುಮಾರು 14 ಸಾವಿರ ಸಿಬ್ಬಂದಿಗಳು ಮುಷ್ಕರ ಹೂಡಿದ್ದಾರೆ. ಈ ವಿಮಾನ ನಿಲ್ದಾಣಗಳನ್ನು ಮುಚ್ಚಿದರೆ ಇಲ್ಲಿ ಕರ್ತವ್ಯ ನಿರತವಾಗಿರುವ ಸಿಬ್ಬಂದಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಅವರನ್ನು ಬೇರೆಡೆ ಎಲ್ಲೆಂದರಲ್ಲಿಗೆ ವರ್ಗಾಯಿಸಲಾಗುತ್ತದೆ ಎಂಬುದು ಸಿಬ್ಬಂದಿಗಳ ಅಳಲು.
ಮತ್ತಷ್ಟು
'ಶತಕ ವಂಚಿತ' ಭಾರತರತ್ನ ಶಿಫಾರಸು!
ಮಕ್ಕಳ ವಿರುದ್ಧ ಅಪರಾಧ ತಡೆಗೆ ಕಠಿಣ ಕ್ರಮ
ಶೇ.33 ಮೀಸಲಾತಿಗೆ ಎನ್‌ಸಿ ಸಿದ್ಧ
ಚುನಾವಣೆಗೆ ಸಿದ್ಧರಾಗಲು ಸಂಸದರಿಗೆ ಸೂಚನೆ
ಅಬ್ದುಲ್ ಕಲಾಂರಿಗೆ ಈಗಲೂ ಬಿಡುವೇ ಇಲ್ಲ!
ಮೇಘಾಲಯ: ಲಪಂಗ್ ಅಧಿಕಾರ ಸ್ವೀಕಾರ