ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರೊ| ಸಭರ್ವಾಲ್ ಪ್ರಕರಣ ನಾಗ್ಪುರಕ್ಕೆ
ಪ್ರೊ| ಸಭರ್ವಾಲ್ ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಬುಧವಾರ ಮಧ್ಯಪ್ರದೇಶದ ಉಜ್ಜೈನಿಯಿಂದ ಮಹಾರಾಷ್ಟ್ರದ ನಾಗ್ಪುರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಮಧ್ಯಪ್ರದೇಶ ಸರಕಾರಕ್ಕೆ ತೀವ್ರ ಹಿನ್ನಡೆಯುಂಟಾಗಿದೆ.

ಅಲ್ಲದೆ, ಪ್ರಕರಣದ ಸಾಕ್ಷಿಗಳಾಗಿರುವ ಮೂವರು ಪೊಲೀಸರ ಹೇಳಿಕೆಯನ್ನೂ ಸಹ ಮತ್ತೆ ದಾಖಲಿಸಿಕೊಳ್ಳಲು ನ್ಯಾಯಾಲಯ ಆದೇಶ ನೀಡಿದೆ. ಮತ್ತು ಪ್ರಕರಣದ ವರ್ಗಾವಣೆಯ ವೆಚ್ಚವನ್ನು ಮಧ್ಯಪ್ರದೇಶ ಸರಕಾರ ಭರಿಸಬೇಕಾಗಿದೆ. ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಪ್ರಕರಣದ ಅಭಿಯೋಜಕರ ಬದಲಾವಣೆಗೂ ನಿರ್ದೇಶನ ನೀಡಿದೆ.

ಆರೋಪಿಗಳು ಹಾಗೂ ಪ್ರೊಫೆಸರ್ ಕುಟುಂಬಸ್ಥರು ಪ್ರಕರಣದ ವಿಚಾರಣೆಯನ್ನು ನಾಗ್ಪುರ ನ್ಯಾಯಾಲಯಕ್ಕೆ ವರ್ಗಾಯಿಸುವ ಒಮ್ಮತಕ್ಕೆ ಬಂದ ಬಳಿಕ, ನಾಗ್ಪುರ ಸೆಷನ್ಸ್ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಎಂಟು ತಿಂಗಳೊಳಗಾಗಿ ಪೂರೈಸಬೇಕು ಎಂದು ಆದೇಶಿಸುವುದಾಗಿ ನ್ಯಾಯಪೀಠ ಶುಕ್ರವಾರ ಹೇಳಿತ್ತು.

ಉಜ್ಜೈನಿಯ ಮಹದೇವ್ ಕಾಲೇಜಿನ ಪ್ರೊ| ಹರಿಚರಣ್ ಸಿಂಗ್ ಸಬರ್ವಾಲ್ ಅವರು ಎಬಿವಿಪಿ ಕಾರ್ಯಕರ್ತರಿಂದ ಹತ್ಯೆಗೀಡಾಗದಿದ್ದಾರೆನ್ನಲಾಗಿದೆ. ಕಾಲೇಜು ವಿದ್ಯಾರ್ಥಿ ಸಂಘಟನೆಯ ಚುನಾವಣೆ ರದ್ದುಗೊಳಿಸಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಕಾರ್ಯಕರ್ತರ ಹಲ್ಲೆಗೀಡಾದ ತನ್ನ ಸಹೋದ್ಯೋಗಿಯನ್ನು ರಕ್ಷಿಸಲು ತೆರಳಿದ ಸಭರ್ವಾಲ್ ಸಾವಿಗೀಡಾಗಿದ್ದರು.
ಮತ್ತಷ್ಟು
ಉತ್ತರದೊಂದಿಗೆ ಬಂದ ಪ್ರಶ್ನೆ ಪತ್ರಿಕೆ!
ಶತ್ರುಘ್ನ ಸಿನ್ಙಾ ಔಟ್!
ವಿಮಾನ ಸಿಬ್ಬಂದಿಗಳ ರಾಷ್ಟ್ರವ್ಯಾಪಿ ಮುಷ್ಕರ ಆರಂಭ
'ಶತಕ ವಂಚಿತ' ಭಾರತರತ್ನ ಶಿಫಾರಸು!
ಮಕ್ಕಳ ವಿರುದ್ಧ ಅಪರಾಧ ತಡೆಗೆ ಕಠಿಣ ಕ್ರಮ
ಶೇ.33 ಮೀಸಲಾತಿಗೆ ಎನ್‌ಸಿ ಸಿದ್ಧ