ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇರಳ ಹಿಂಸಾಚಾರ: ಸಂಸತ್ತಿನಲ್ಲಿ ಭಾರೀ ಕೋಲಾಹಲ
PIB
ಕೇರಳದಲ್ಲಿನ ಹಿಂಸಾಚಾರ ಪ್ರಕರಣವು ಸಂಸತ್ತನ್ನು ಅಪ್ಪಳಿಸಿದ್ದು, ಭಾರೀ ಕೋಲಾಹಲ ಸೃಷ್ಟಿಸಿತಲ್ಲದೆ, ಉಭಯ ಸದನಗಳನ್ನು ಮುಂದುವರಿಸುವಂತೆ ಮಾಡಿದೆ. ಅಲ್ಲದೆ ಸಂಸದರ ವರ್ತನೆಯಿಂದ ತೀವ್ರ ರೋಸಿಹೋದ ಸ್ಪೀಕರ್ ಸೋಮನಾಥ ಚಟರ್ಜಿ ಸಂದದಿರಿಗೆ, "ನೀವು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದೀರಿ" ಎಂಬ ಹೇಳಿಕೆ ನೀಡುವಂತೆ ಮಾಡಿತು.

ಲೋಕಸಭೆಯಲ್ಲಿ ಅಧಿವೇಶನ ಆರಂಭಗೊಳ್ಳುತ್ತಿರುವಂತೆ, ಬಿಜೆಪಿ ಸದಸ್ಯರು ತುದಿಗಾಲಲ್ಲಿ ನಿಂತಿದ್ದು, ಕೇರಳದಲ್ಲಿ ನಡೆದಿರುವ ಹಿಂಸಾಚಾರದ ಕುರಿತು ಚರ್ಚಿಸಲು ಪ್ರಶ್ನೋತ್ತರ ಅವಧಿಯನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು. ಕೇರಳದ ಕಣ್ಣೂರಿನಲ್ಲಿ ನಡೆದ ಘಟನೆಗಳಿಗೆ ಎಡಪಕ್ಷಗಳು ಕಾರಣ ಎಂದು ಆಪಾದಿಸಿದ ಅವರು, ಅಲ್ಲಿನ ಪರಿಸ್ಥಿತಿ ತೀರಾಹದಗೆಟ್ಟಿದ್ದು, ಆ ಕುರಿತು ತಕ್ಷಣ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.

ಕೇಂದ್ರವು ಸಾಕಷ್ಟು ಕೇಂದ್ರೀಯ ಪಡೆಗಳನ್ನು ನಿಯೋಜಿಸಿದಲ್ಲಿ ಮಾತ್ರ ಕಣ್ಣೂರಿನ ರಕ್ತಪಾತ ಕೊನೆಗೊಳ್ಳಬಹುದು ಎಂಬ ಹೈಕೋರ್ಟಿನ ಹೇಳಿಕೆಯನ್ನು ಪ್ರಸ್ತಾಪಿಸಿ ಬೆಜೆಪಿಯು ಈ ವಿಚಾರವನ್ನು ಲೋಕಸಭೆಯ ಮುಂದಿರಿಸಿತು. ಬಿಜೆಪಿ ಮತ್ತು ಎಡಪಕ್ಷಗಳ ನಡುವೆ ಬಲವಾದ ಮಾತಿನ ಘರ್ಷಣೆಗಳು ಸಂಭವಿಸಿ ತೀವ್ರ ಕೋಲಾಹಲ ಉಂಟಾಯಿತಲ್ಲದೆ, ಯಾರು ಏನು ಮಾತಾಡುತ್ತಾರೆಂಬುದು ಗೊತ್ತಾಗದ ಪರಿಸ್ಥಿತಿ ಉದ್ಭವವಾಯಿತು.

ನಾಚಿಕೆಗೇಡು
ಸಂಸದರ ವರ್ತನೆಯನ್ನು ನಾಚಿಕೆಗೇಡೆಂದು ವರ್ಣಿಸಿದ ಸ್ಪೀಕರ್ ಚಟರ್ಜಿ ಇದು 'ಪ್ರಜಾಪ್ರಭುತ್ವದ ಕೊಲೆ' ಎಂದು ಸಂಸದರನ್ನು ತರಾಟೆಗೆ ತೆಗೆದುಕೊಂಡರು. ಸದನವನ್ನು ಸಹಜಸ್ಥಿತಿಗೆ ಮರಳಿಸಲು ಅವರು ಪದೇಪದೇ ಮಾಡಿರುವ ಮನವಿಯನ್ನು ಸಂಸದರು ಪರಿಗಣಿಸದಿದ್ದಾಗ ಅವರು ಸದನವನ್ನು ಮಧ್ಯಾಹ್ನದ ತನಕ ಮುಂದೂಡಿದರು.

ಬಿಜೆಪಿ ಮತ್ತು ಸಿಪಿಐ(ಎಂ) ನಡುವಿನ ಘರ್ಷಣೆಯಿಂದಾಗಿ ಇದುವರೆಗೆ ಏಳುಮಂದಿ ಹತರಾಗಿದ್ದಾರೆ.
ಮತ್ತಷ್ಟು
ಪ್ರೊ| ಸಭರ್ವಾಲ್ ಪ್ರಕರಣ ನಾಗ್ಪುರಕ್ಕೆ
ಉತ್ತರದೊಂದಿಗೆ ಬಂದ ಪ್ರಶ್ನೆ ಪತ್ರಿಕೆ!
ಶತ್ರುಘ್ನ ಸಿನ್ಙಾ ಔಟ್!
ವಿಮಾನ ಸಿಬ್ಬಂದಿಗಳ ರಾಷ್ಟ್ರವ್ಯಾಪಿ ಮುಷ್ಕರ ಆರಂಭ
'ಶತಕ ವಂಚಿತ' ಭಾರತರತ್ನ ಶಿಫಾರಸು!
ಮಕ್ಕಳ ವಿರುದ್ಧ ಅಪರಾಧ ತಡೆಗೆ ಕಠಿಣ ಕ್ರಮ