ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಅವರ ಪತಿ, ಪಿಪಿಪಿ ಪಕ್ಷದ ಸಹ-ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರನ್ನು ಇನ್ನೊಂದು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ಮುಕ್ತವಾಗಿಸಿದೆ.
ಕಳೆದ ವಾರ ರಾವಲ್ಪಿಂಡಿಯ ನ್ಯಾಯಾಲಯವು ಜರ್ದಾರಿ ವಿರುದ್ಧವಿದ್ದ ಏಳು ಪ್ರಕರಣಗಳಲ್ಲಿ ಐದನ್ನು ವಜಾಮಾಡಿತ್ತು.
ಭುಟ್ಟೋ ದಂಪತಿಗಳ ವಿರುದ್ಧವಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಹಿಂಪಡೆಯಲು ಕಳೆದ ಅಕ್ಟೋಬರಿನಲ್ಲಿ ಪಾಸು ಮಾಡಲಾಗಿರುವ ರಾಷ್ಟ್ರೀಯ ವ್ಯಾಜ್ಯಪರಿಹಾರ ಸುಗ್ರೀವಾಜ್ಞೆಯನ್ವಯ, ಜರ್ದಾರಿ ವಿರುದ್ಧದ ಪ್ರಕರಣಗಳನ್ನು ಹಿಂತೆಗೆಯಲಾಗಿದೆ.
|