ಬ್ರಿಟಿಷ್ ಪ್ರವಾಸಿ ಸ್ಕಾರ್ಲೆಟ್‌ಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸ್ಯಾಮ್ಸನ್ ಡಿಸೋಜಾ ತಾನು ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿ ವಿಚಾರಣೆಯಲ್ಲಿ ತಪ್ಪೋಪ್ಪಿಕೊಂಡಿದ್ದಾನೆ.
ಪೊಲೀಸ್ ವಿಚಾರಣೆಯಲ್ಲಿ ಸ್ಯಾಮ್ಸನ್ ಇನ್ನಿತರ ನಾಲ್ವರು ಆರೋಪಿಗಳ ಹೆಸರುಗಳನ್ನು ಬಹಿರಂಗ ಪಡಿಸಿದ್ದು, ಮಾದಕ ವಸ್ತು ಸಾಗಾಣಿಕೆದಾರ ಪ್ಲಾಸಿಡೊ ಕರ್ವಾಲೋ ಅಲಿಯಾಸ್ ಶನ್ನಾಬಾಯ್ ಸ್ಕಾರ್ಲೆಟ್ ಕೊಲೆಯಲ್ಲಿ ಶಾಮೀಲು ಆಗಿರುದು ಸ್ಯಾಮಸಂಗ್ ಹೇಳಿಕೆಯಿಂದ ದೃಡಪಟ್ಟಿದ್ದು, ಬುಧವಾರ ರಾತ್ರಿ ಪ್ಲಾಸಿಡೊನನ್ನು ಬಂಧಿಸಲಾಗಿದೆ.
ಪ್ರಕರಣದ ತನಿಖೆಯನ್ನು ಅವಸರದಿಂದ ಪೂರ್ಣಗೊಳಿಸುವುದರಲ್ಲಿ ಇರುವ ಪೊಲೀಸರ ಪಾತ್ರಗಳನ್ನು ಪರೀಶಿಲಿಸಲಾಗುವುದು ಎಂದು ಮೂಲಗಳು ಹೇಳಿವೆ.
ಕೊಲೆ ಪ್ರಕರಣದಲ್ಲಿ ಆಪಾದಿತನಾಗಿರುವ ಪ್ಲಾಸಿಡೊ ಕರ್ವಾಲೋನನ್ನು ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಎದುರು ಹಾಜರು ಪಡಿಸಲಿದ್ದು, ವಿಚಾರಣೆಗಾಗಿ 14 ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ನ್ಯಾಯಾಲಯವನ್ನು ಕೇಳಿಕೊಳ್ಳುವ ಸಾಧ್ಯತೆ ಇದೆ.
ಇದೇ ಸಮಯದಲ್ಲಿ ಬ್ರಿಟಿಷ್ ಯುವತಿ ಸ್ಕಾರ್ಲೆಟ್ ಕೀಲಿಂಗ್ ಅತಿಯಾದ ಮಾದಕ ವಸ್ತು ಸೇವನೆ ಮತ್ತು ಸಮುದ್ರದಲ್ಲಿ ಕೊಚ್ಚಿ ಹೊದ ಕಾರಣ ಸಾವನ್ನಪ್ಪಿದ್ದಾಳೆ ಎಂದು ತನಿಖೆಯ ನಂತರ ಪೊಲೀಸರು ತೀರ್ಮಾನಿಸಿ ಅಂತಿಮ ತನಿಖಾ ವರದಿ ಸಿದ್ದಪಡಿಸಿದ್ದರು.
|