ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಸ್ತ್ರಾಸ್ತ್ರ ಖರೀದಿಗೆ 60 ಕೋಟಿ ರೂ ಮೀಸಲಿಟ್ಟ ನಕ್ಸಲರು
2007-09 ರ ಅವಧಿಯಲ್ಲಿ ನಕ್ಸಲ್ ವಾದಿಗಳು ಶಸ್ತ್ತಾಸ್ತ್ರ ಖರೀದಿಗೆ 60 ಕೋಟಿ ರೂಗಳನ್ನು ಮೀಸಲು ಇಟ್ಟಿದ್ದಾರೆ ಎಂದು ರಾಜ್ಯ ಸಭೆಗೆ ಮಾಹಿತಿ ನೀಡಲಾಯಿತು.

ಪ್ರಶ್ನೋತ್ತರ ಸಮಯದಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ರಾಜ್ಯ ಮಟ್ಟದ ಗೃಹ ಖಾತೆ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರು ಜಾರ್ಖಂಡ್ ಪೊಲೀಸರುವ ಬಂಧಿಸಿರುವ ನಕ್ಸಲ್ ಉಗ್ರವಾದಿಗಳಿಂದ ಹೊರತೆಗೆಯಲಾಗಿರುವ ಮಾಹಿತಿಯಿಂದ ಈ ಅಂಶ ವ್ಯಕ್ತವಾಗಿದೆ ಎಂದು ಹೇಳಿದರು.

ಬಂಧಿತ ನಕ್ಸಲ್ ಉಗ್ರರಿಂದ ಇನ್ನಾವುದೇ ಮಾಹಿತಿ ಸರಕಾರಕ್ಕೆ ದೊರೆತಿಲ್ಲ ಎಂದು ಹೇಳಿದ ಅವರು ಮಾವೋವಾದಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಸಂಪರ್ಕ ಸಾಧನಗಳನ್ನು ಕಾರ್ಯಾಚರಣೆ ಸಮಯದಲ್ಲಿ ಬಳಸುತ್ತಿದ್ದಾರೆ ಎನ್ನುವುದು ಖಚಿತವಾಗಿದೆ. ಮಾವೋವಾದಿಗಳು ಶಸ್ತ್ರಾಸ್ತ್ರ ಅಪಹರಣ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರ ತಯಾರಕರ ಮೂಲಕ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದಾರೆ.

ನಕ್ಸಲ್ ಸಮಸ್ಯೆಗೆ ಸಂಬಂಧಿಸಿದಂತೆ ಕೇಳಲಾದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು 2006ರಲ್ಲಿ 1,509ನಕ್ಸಲ್ ದಾಳಿಗಳು ನಡೆದಿದ್ದು ಇದು 2007ರಲ್ಲಿ 1,565ಕ್ಕೆ ತಲುಪಿದೆ. ರಕ್ಷಣಾ ಪಡೆಗಳ ಮೇಲಿನ ದಾಳಿಯ ಪ್ರಮಾಣದಲ್ಲಿ ವಿಪರಿತ ಏರಿಕೆ ಕಂಡು ಬಂದಿದೆ. 2006ರಲ್ಲಿ 157 ಬಾರಿ ನಕ್ಸಲ್‌ರು ರಕ್ಷಣಾ ಪಡೆಗಳ ಮೇಲೆ ದಾಳಿ ಮಾಡಿದ್ದರು. 2007ರಲ್ಲಿ 236 ರ ಬಾರಿ ಪೊಲೀಸ್ ಪಡೆಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ಅವಧಿಯಲ್ಲಿ ನಾಗರಿಕರ ಮೇಲೆ ನಡೆದ ದಾಳಿಗಳು 521ರಿಂದ 460ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು.
ಮತ್ತಷ್ಟು
ಸ್ಕಾರ್ಲೆಟ್ ಕೊಲೆ ಪ್ರಕರಣ: ಸ್ಯಾಮ್ಸನ್ ತಪ್ಪೊಪ್ಪಿಗೆ
ಸಿನಿ ತಾರೆಯರ ಹೆಸರಲ್ಲಿ ಅಕ್ರಮ ವೀಸಾ ಜಾಲ
ಇನ್ನೊಂದು ಪ್ರಕರಣದಲ್ಲೂ ಜರ್ದಾರಿಗೆ ಮುಕ್ತಿ
ಕೇರಳ ಹಿಂಸಾಚಾರ: ಸಂಸತ್ತಿನಲ್ಲಿ ಭಾರೀ ಕೋಲಾಹಲ
ಪ್ರೊ| ಸಭರ್ವಾಲ್ ಪ್ರಕರಣ ನಾಗ್ಪುರಕ್ಕೆ
ಉತ್ತರದೊಂದಿಗೆ ಬಂದ ಪ್ರಶ್ನೆ ಪತ್ರಿಕೆ!