ಬ್ರಿಟಿಷ್ ಯುವತಿ ಸ್ಕಾರ್ಲೆಟ್ ಕೀಲಿಂಗ್ ಅವಳ ಕೊಲೆ ಪ್ರಕರಣವನ್ನು ಅಂತಿಮವಾಗಿ ಭೇದಿಸುವಲ್ಲಿ ಪೊಲೀಸರು ಸಫಲವಾಗಿದ್ದು. ಬುಧವಾರ ಪೊಲೀಸರು ಬಂಧಿಸಿರುವ ಪ್ಲಾಸಿಡೊ ಕರ್ವಾಲೋ ಎಂಬ ಮಾದಕ ವಸ್ತು ಮಾರಟಗಾರ. ಸ್ಕಾರ್ಲೇಟ್‌ಳಿಗೆ ಅತಿಯಾದ ಮದ್ದು ಸೇವನೆ ಮಾಡಿಸಿ, ಎರಡು ಬಾರಿ ಅತ್ಯಾಚಾರ ಎಸಗಿ ನಂತರ ಸಮುದ್ರಕ್ಕೆ ಎಸೆದಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪೊಲೀಸ್ ಅಧಿಕಾರಿಗಳು ಆಪಾದಿತ ಕರ್ವಾಲೋನನ್ನು ರಕ್ಷಿಸುವ ಯತ್ನದಲ್ಲಿ ಶಾಮೀಲು ಅಗಿರುವುದು ದೃಡ ಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಒಪ್ಪಿಕೊಂಡಿದ್ದು. ಆರೋಪಿ ಕರ್ವಾಲೋನಿಗೆ ರಕ್ಷಣೆ ನೀಡುವುದಕ್ಕೆ ಯತ್ನಿಸಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಸ್ಯಾಮಸೊನ್ ಡಿ ಸೋಜಾ ಎಂಬ ವ್ಯಕ್ತಿ ಸ್ಕಾರ್ಲೆಟ್‌ಳೊಂದಿಗೆ ಅವಳ ಸಾವಿಗೆ ಮುನ್ನ ಇದ್ದ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿದ ನಂತರ ಸ್ಯಾಮಸನ್‌ನ್ನು ಬಂಧಿಸಲಾಗಿತ್ತು. ಸ್ಯಾಮಸನ್ ವಿಚಾರಣೆಯಲ್ಲಿ ಕರ್ವಾಲೋ, ಸ್ಕಾರ್ಲೆಟ್‌ಳ ಅಸಹಜ ಸಾವಿಗೆ ಕಾರಣ ಎಂದು ಹೇಳಿದ ನಂತರ ಪೊಲೀಸರು ಕರ್ವಾಲೋನನ್ನು ಬಂಧಿಸಿ, ಕೊಲೆ ಮತ್ತು ಅತ್ಯಾಚಾರ ಆರೋಪಗಳನ್ನು ಹೋರಿಸಿದ್ದಾರೆ.
ಸ್ಕಾರ್ಲೆಟ್ ಸಾವಿನ ತನಿಖೆಯನ್ನು ಸ್ವತಂತ್ರವಾಗಿ ಮಾಡಬೇಕು ಎಂದು ಪ್ರಧಾನಿ ಮನ್‌ಮೋಹನ್ ಸಿಂಗ್ ಅವರಿಗೆ ಬರೆದಿರುವ ಸ್ಕಾರ್ಲೆಟ್ ತಾಯಿ ಫಿಯೊನಾ ಮೆಕ್‌ವೊನ್ ಅವರು ಕರ್ವಾಲೋ ಬಂಧನ, ಪ್ರಕರಣ ಮುಚ್ಚಿಹಾಕುವ ಗೋವಾ ಪೊಲೀಸರ ಇನ್ನೊಂದು ಪ್ರಯತ್ನ ಎಂದು ಹೇಳಿದ್ದು. ನಿಜವಾದ ಆರೋಪಿಗಳು ಮತ್ತು ಗೋವಾ ಪೊಲೀಸರ ನಡುವೆ ಅಕ್ರಮ ಒಳ ಸಂಬಂಧಗಳಿದ್ದು, ಕರ್ವಾಲೋ ಎಂಬ ಸಣ್ಣ ಮಟ್ಟದ ಅಪರಾಧ ಹಿನ್ನೆಲೆಯುಳ್ಳವನನ್ನು ಬಂಧಿಸಿ ಪ್ರಕರಣ ಮುಚ್ಚುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿದ್ದಾರೆ.
15 ವರ್ಷದ ಸ್ಕಾರ್ಲೆಟ್ ಅವಳ ಮೃತ ದೇಹವು ಅಂಜುನಾ ಬೀಚ್‌ನಲ್ಲಿ ಅರೇ ನಗ್ನಾವಸ್ಥೆಯಲ್ಲಿ ಪೊಲೀಸರಿಗೆ ದೊರೆತಿತ್ತು.
|