ವಿಮಾನ ನಿಲ್ದಾಣ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿರಿಸಿದ್ದು ವಿಮಾನ ಸೇವೆಯಲ್ಲಿ ವ್ಯತಯವಾಗದೇ ಪ್ರಯಾಣಿಕ ಸೇವೆಗಳಲ್ಲಿ ತೊಂದರೆ ಎದುರಾಗಿದೆ.
ದೇಶಿಯ 10 ವಿಮಾನಗಳಲ್ಲಿ ಐದು ವಿಮಾನಗಳು ಏರ್‌ಇಂಡಿಯಾಗೆ ಸೇರಿದ್ದು ಬೆಂಗಳೂರಿಗೆ ಬೆಳಿಗ್ಗೆ ಪ್ರಯಾಣಿಸಿವೆ.ವಿಮಾನ ಸೇವೆಗಳಲ್ಲಿ ಯಾವುದೇ ತೊಂದರೆ ಎದುರಾಗಿಲ್ಲವೆಂದು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣಗಳಲ್ಲಿ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದ್ದರೂ ನಿಲ್ದಾಣದ ಆವರಣ ಹಾಗೂ ಶೌಚಾಲಯಗಳನ್ನು ಶುಚಿಗೊಳಿಸದೇ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಹೇಳಿದೆ.
ಪ್ರಯಾಣಿಕರು ಬಿಸಾಡಿದ ಅಹಾರ, ಸೀಗರೆಟ್, ಪೇಪರ್‌ಗಳಿಂದ ಡಸ್ಟ್‌ಬಿನ್ ತುಂಬಿಹೋಗಿದ್ದು ಪ್ರಯಾಣಿಕರನ್ನು ದೂರವಿರುವಂತೆ ಮಾಡಿದೆ ಎಂದು ಏರ್‌ಪೋರ್ಟ್ ಅಥಾರಿಟಿ ಪ್ರಕಟಿಸಿದೆ.
|