ಸಚಿವ ಸಂಪುಟದಲ್ಲಿ ರಕ್ಷಣಾ ಖಾತೆಯನ್ನು ವಹಿಸಿಕೊಳ್ಳುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಖಂಡರು ತಮ್ಮನ್ನು ಒತ್ತಾಯಿಸಿದ್ದರು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಪಿ.ಎ. ಸಂಗ್ಮಾ ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್‌ನ ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿ ರಕ್ಷಣಾ ಸಚಿವ ಸ್ಥಾನವನ್ನು ಅಲಂಕರಿಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಪಾಲುದಾರ ಸ್ಥಾನವನ್ನು ಹೊಂದುವಂತೆ ಒತ್ತಾಯಿಸಿದ್ದರು ಎಂದು ಸಂಗ್ಮಾ ಹೇಳಿದ್ದಾರೆ.
ಆದರೆ ತಮಗೆ ಕರೆ ಮಾಡಿದ ವ್ಯಕ್ತಿ ಯಾರು ಎನ್ನುವುದನ್ನು ಸಂಗ್ಮಾ ಬಹಿರಂಗಪಡಿಸಲು ನಿರಾಕರಿಸಿದರು.
ಭಾರತದ ಘನತೆಯನ್ನು ಎತ್ತಿಹಿಡಿಯಲು ಎಲ್ಲವನ್ನು ತ್ಯಾಗ ಮಾಡಿದ ವ್ಯಕ್ತಿಯನ್ನು ಯಾವುದೇ ಅಮಿಷಗಳಿಂದ ಬಂಧಿಸಲು ಸಾಧ್ಯವಿಲ್ಲ. ಮೇಘಾಲಯ ಪ್ರೋಗ್ರೆಸಿವ್ ಅಲಯನ್ಸ್ ಅಡಿಯಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳು ಒಂದಾಗಲಿವೆ ಎಂದು ಹೇಳಿದರು.
|