ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶುಕ್ರವಾರ: ಶಂಕರ್ ರಾಮನ್ ಕೊಲೆ ಪ್ರಕರಣ ವಿಚಾರಣೆ
ಕಾಂಚಿ ಮಠದ ಹಿರಿಯ ಮತ್ತು ಕಿರಿಯ ಸ್ವಾಮಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಶಂಕರ್ ರಾಮನ್ ಕೊಲೆ ಪ್ರಕರಣದ ವಿಚಾರಣೆಯನ್ನು ಪುದುಚೇರಿಯ ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಕೈಗೆತ್ತಿಕೊಳ್ಳಲಿದೆ.

ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಡಿ. ಕೃಷ್ಣರಾಜ್ ಅವರ ಎದುರು 24 ಆರೋಪಿಗಳ ಪೈಕಿ ಹತ್ತು ಆರೋಪಿಗಳು ಮಾತ್ರ ಹಾಜರಾಗಿದ್ದು, ನ್ಯಾಯಾಲಯದ ಹಾಜರಾಗದೇ ಇರುವವರ ಸಾಲಿನಲ್ಲಿ ಕಾಂಚಿ ಮಠದ ಶ್ರೀಗಳಾದ ಜಯೇಂದ್ರ ಮತ್ತು ವಿಜಯೇಂದ್ರ ಸರಸ್ವತಿ ಸ್ವಾಮಿಗಳ ಹೆಸರು ಸೇರಿದೆ.

ಪ್ರಕರಣ ಪುದುಚೇರಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನಂತರವೂ ತಮಿಳುನಾಡಿನ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕರಣದಲ್ಲಿ ಮುಂದುವರಿಯುತ್ತಿರುವುದನ್ನು ಅಕ್ಷೇಪಿಸಿ ಕಾಂಚಿ ಮಠದ ಶ್ರೀಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರಿಂದ ಶಂಕರ್ ರಾಮನ್ ಕೊಲೆ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ಮುಂದೂಡಿತ್ತು.

ಇದಕ್ಕೂ ಮುನ್ನ ಸರ್ವೋಚ್ಚ ನ್ಯಾಯಾಲಯವು ಈರ್ವರು ಸ್ವಾಮಿಗಳಿಗೆ ಜಾಮೀನು ನೀಡಿ ಕೊಲೆ ಪ್ರಕರಣದ ವಿಚಾರಣೆಯನ್ನು ತಮಿಳುನಾಡಿನಿಂದ ಕೇಂದ್ರಾಡಳಿತದ ಪುದುಚೇರಿಗೆ ವರ್ಗಾಯಿಸಿತ್ತು.
ಮತ್ತಷ್ಟು
ವಿಮಾನ ನಿಲ್ದಾಣ ಕಾರ್ಮಿಕರ ಮುಷ್ಕರ ಅಂತ್ಯ
ರಕ್ಷಣಾ ಸಚಿವ ಸ್ಥಾನಕ್ಕೆ ಅಹ್ವಾನವಿತ್ತು- ಸಂಗ್ಮಾ
ವಿಮಾನ ನಿಲ್ದಾಣ ನೌಕರರ ಮುಷ್ಕರ ಎರಡನೇ ದಿನಕ್ಕೆ
ಕರ್ವಾಲೋ ಅತ್ಯಾಚಾರಕ್ಕೆ ಸ್ಕಾರ್ಲೆಟ್ ಬಲಿ
ಶಸ್ತ್ರಾಸ್ತ್ರ ಖರೀದಿಗೆ 60 ಕೋಟಿ ರೂ ಮೀಸಲಿಟ್ಟ ನಕ್ಸಲರು
ಸ್ಕಾರ್ಲೆಟ್ ಕೊಲೆ ಪ್ರಕರಣ: ಸ್ಯಾಮ್ಸನ್ ತಪ್ಪೊಪ್ಪಿಗೆ