ಕಳೆದ ವರ್ಷ ಮಾರ್ಚ್ 14 ರಂದು ಪೊಲೀಸರ ಗುಂಡಿನ ದಾಳಿಗೆ 14 ಮಂದಿ ಬಲಿಯಾಗಿ 100ಕ್ಕೂ ಹೆಚ್ಚಿನ ಜನ ಗಾಯಾಳುಗಳಾದ ಘಟನೆಯ ಮೊದ ವಾರ್ಷಿಕೋತ್ಸವದ ಅಂಗವಾಗಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ನಂದಿಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಸರಕಾರದ ಭೂಸ್ವಾದೀನದ ವಿರುದ್ದ ಹೋರಾಡಿದ ಹಾಗೂ ಹೋರಾಟದಲ್ಲಿ ಮಡಿದ ಧೈರ್ಯವಂತ ಗ್ರಾಮಸ್ಥರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭೂ ಸ್ವಾಧೀನದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ನಿಶಸ್ತ್ರ ಗ್ರಾಮಸ್ಥರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಟೆಖಾಲಿ ಸೇತುವೆ ಬಳಿ ಗ್ರಾಮಸ್ಥರು ಸಭೆ ಸೇರಲಿದ್ದು ಮುಂದಿನ ಹೋರಾಟದ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಮತಾ ಹೇಳಿದ್ದಾರೆ.
ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ನಂದಿಗ್ರಾಮದ ಹುತಾತ್ಮ ಗ್ರಾಮಸ್ಥರ ನೆನಪಿನ ಅಂಗವಾಗಿ ಇಂದು ಕೋಲ್ಕತಾದಲ್ಲಿ ಎಸ್‌ಯುಸಿಐ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
|