ಪ್ರಧಾನಿ ಮನಮೋಹನ್ ಸಿಂಗ್ ವಾರಣಾಸಿಗೆ ಎರಡು ದಿನಗಳ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ರಸ್ತೆಗೆ ಅಡೆತಡೆಯಾದ ಕಟ್ಟಡಗಳನ್ನು ಜಿಲ್ಲಾಡಳಿತ ಸ್ಥಳಿಯರ ಪ್ರತಿಭಟನೆಯ ನಡುವೆ ಧ್ವಂಸ ಮಾಡಿದೆ.
ನಗರದಲ್ಲಿರುವ 12ಕ್ಕೂ ಹೆಚ್ಚಿನ ಕಟ್ಟಡಗಳನ್ನು ಜಿಲ್ಲಾಡಳಿತ ನಾಶಪಡಿಸಿದ್ದು, ಸ್ಥಳಿಯರ ಪ್ರತಿಭಟನೆ ತೀವ್ರವಾದ ನಂತರ ಕಟ್ಟಡ ಉರುಳಿಸುವುದನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಎಸ್‌ಪಿಜಿ ಭದ್ರತಾಪಡೆಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಜಿಲ್ಲಾ ವಿಭಾಗಾಧಿಕಾರಿಗಳಾದ ನಿತಿನ್ ರಮೇಶ್ ಗೋಕರ್ಣಾ ಅವರ ಜೊತೆ ಭದ್ರತಾ ಕ್ರಮಗಳನ್ನು ಕುರಿತು ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರಧಾನಿ ಅವರು ಸಾಗುವ ಮಾರ್ಗದಲ್ಲಿ ಭಾರಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಾಶಿ ವಿಶ್ವನಾಥ್ ಮಂದಿರ ಹಾಗೂ ಗಂಗಾ -ಆರತಿಯನ್ನು ನೋಡಲು ದಶವಮೆಧ್ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಿಸಿದೆ.
|