ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಯಿಗೆ ತಕ್ಕ ಮಗ: ಎತ್ತರಕ್ಕೇರುವತ್ತ ಪುಟಾಣಿ
ತಾಯಿಯಂತೆ ಮಗ. ಏಷ್ಯಾದ ಅತ್ಯಂತ ಎತ್ತರದ ಮಹಿಳೆ ಎಂಬ ಹೆಗ್ಗಳಿಕೆಯೊಂದಿಗೆ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಹೆಸರು ಬರೆಸಿಕೊಂಡ ಮಹಿಳೆಯ ಒಂಬತ್ತು ತಿಂಗಳ ಮಗುವೊಂದು ಅಮ್ಮನದೇ ಹಾದಿಯಲ್ಲಿ ಮುಂದುವರಿದಿದೆ. ಇಷ್ಟು ಸಣ್ಣ ಪ್ರಾಯದಲ್ಲೇ ಅದು ಮೂರು ಅಡಿಗಿಂತಲೂ ಹೆಚ್ಚು ಉದ್ದವಿದೆಯಂತೆ. ಈ ಗಂಡು ಮಗುವೂ ದಾಖಲೆ ಮಾಡಲು ಹೊರಟಿದೆ ಎಂದಿದ್ದಾರೆ ವೈದ್ಯರು.

9 ತಿಂಗಳ ಮಗು ಮೂರಡಿ, ಒಂದಿಂಚು ಎತ್ತರ ಮತ್ತು 22.5 ಕಿಲೋ ತೂಕ ಇರುವುದು ಸಾಮಾನ್ಯ ಅಲ್ಲ ಎಂದು ಮೀರತ್‌ನ ಮಧು ಜಿಂದಾಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಎತ್ತರದ ಪೋಷಕರ ಮಕ್ಕಳು ಕೂಡ ಎತ್ತರವೇ ಇರಬೇಕೆಂಬ ನಿಯಮವೇನೂ ಇಲ್ಲ. ಆದರೆ ಈ ಹುಡುಗ (ಕರಣ್) ತನ್ನ ತಾಯಿಯನ್ನು ಮೀರಿಸುವ ಎಲ್ಲ ಲಕ್ಷಣಗಳಿವೆ ಎಂದು ಅವರು ಹೇಳಿದ್ದಾರೆ.

ಸ್ವೆಟ್ಲಾನಾ ಸಿಂಗ್ ಮತ್ತು ಸಂಜಯ್ ಸಿಂಗ್ ಅವರ ಪುತ್ರ ಕರಣ್ ಕಳೆದ ಜೂನ್‌ನಲ್ಲಿ ಜನ್ಮ ತಾಳಿದ್ದ. ಹುಟ್ಟುವಾಗ 63 ಸೆ.ಮೀ. ಉದ್ದ ಮತ್ತು 5.5 ಕೆ.ಜಿ. ತೂಕ ಹೊಂದಿದ್ದ.

ಏಳು ಅಡಿ ಆರು ಇಂಚು ಎತ್ತರವಿರುವ ಸ್ವೆಟ್ಲಾನಾ ಏಷ್ಯಾದ ಅತಿ ಎತ್ತರದ ಮಹಿಳೆ ಎಂದು ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಸ್ಥಾನ ಪಡೆದಿದ್ದರು. ಪ್ರಕೃತಿ ಚಿಕಿತ್ಸಕರಾಗಿರುವ ಸಂಜಯ್ ಕೂಡ ಆರು ಅಡಿ ಆರು ಇಂಚು ಎತ್ತರವಿದ್ದಾರೆ.

ಮಗ ಕರಣ್ ಕೂಡ ಶ್ರೇಷ್ಠ ಬಾಸ್ಕೆಟ್‌ಬಾಲ್ ಪಟು ಆಗಬೇಕೆಂಬುದು ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿರುವ ಸ್ವೆಟ್ಲಾನಾ ಆಕಾಂಕ್ಷೆ.
ಮತ್ತಷ್ಟು
ಗಾಂಧಿ ಎದುರು ನಿಯಮಗಳನ್ನೆಲ್ಲಾ ಸುಟ್ಟುಬಿಡಿ: ಚಟರ್ಜಿ ಕಿಡಿ
ಪ್ರಧಾನಿ ಭೇಟಿಗೆ ವಾರಣಾಸಿ ಸಜ್ಜು
ಅಧ್ಯಕ್ಷೆಯಾಗಿ 10ವರ್ಷ ಪೂರೈಸಿದ ಸೋನಿಯಾ
ಮಮತಾ ನಂದಿಗ್ರಾಮಕ್ಕೆ ಭೇಟಿ
ಶುಕ್ರವಾರ: ಶಂಕರ್ ರಾಮನ್ ಕೊಲೆ ಪ್ರಕರಣ ವಿಚಾರಣೆ
ವಿಮಾನ ನಿಲ್ದಾಣ ಕಾರ್ಮಿಕರ ಮುಷ್ಕರ ಅಂತ್ಯ