ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರ ಬಿದ್ದರೆ ನಾವು ಜವಾಬ್ದಾರರಲ್ಲ: ಕಾರಟ್
ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯುಪಿಎ ಸರಕಾರದೊಂದಿಗೆ ಸಂಬಂಧಗಳನ್ನು ಕೆಡಿಸಿಕೊಂಡಿರುವ ಎಡ ಪಕ್ಷಗಳು ಸರಕಾರ ಒಂದು ವೇಳೆ ಪತನಗೊಂಡರೆ ಅದಕ್ಕೆ ಎಡಪಕ್ಷಗಳು ಜವಾಬ್ದಾರವಲ್ಲ ಎಂದು ಹೇಳಿವೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಪಿಐ(ಎಂ) ಮುಖಂಡ ಪ್ರಕಾಶ್ ಕಾರಟ್ ಅವರು ತಮ್ಮ ಸಹ ಪಕ್ಷಗಳೊಂದಿಗೆ ಸರಕಾರಕ್ಕೆ ಅವಶ್ಯವಿರುವ ಬೆಂಬಲವನ್ನು ಹೊರಗಿನಿಂದ ನೀಡುವುದಾಗಿ ಔಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಎಡಪಕ್ಷಗಳ ಬೆಂಬಲದ ಕಾರಣ ಸರಕಾರ ಅಸ್ತಿತ್ವದಲ್ಲಿದೆ ಎಂದು ಹೇಳಿದ ಅವರು ನಿಗದಿ ಪಡಿಸಿದ ಕಾರ್ಯ ಸೂಚಿಯ ಆಧಾರದ ಮೇಲೆ ಎಡಪಕ್ಷಗಳು ಸರಕಾರಕ್ಕೆ ಬೆಂಬಲ ನೀಡುತ್ತಿವೆ. ಅಮೆರಿಕ ಮತ್ತು ಭಾರತ ನಡುವಿನ ನಾಗರಿಕ ಅಣು ಒಪ್ಪಂದ ಜಾರಿಗೆ ತರುವುದಕ್ಕೆ ಸರಕಾರ ಪ್ರಯತ್ನಿಸಿದಲ್ಲಿ ತಾನು ಬೆಂಬಲ ಹಿಂದೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿವೆ.

ಅಂತಾರಾಷ್ಟ್ರೀಯ ಅಣು ಪ್ರಾಧಿಕಾರದೊಂದಿಗೆ ಭಾರತ ಸರ್ಕಾರ ತನ್ನ ಮಾತುಕತೆಯನ್ನು ಮುಂದುವರಿಸುವುದಕ್ಕೆ ತನ್ನ ಅಭ್ಯಂತರ ಇಲ್ಲ. ಅಣು ಸುರಕ್ಷೆಗೆ ಸಂಬಂಧಿಸಿದಂತೆ ಕರಡು ಒಪ್ಪಂದವನ್ನು ಮಾಡಿಕೊಳ್ಳಬಹುದು ಎಂದು ಯುಪಿಎ-ಎಡಪಕ್ಷಗಳ ಸಮನ್ವಯ ಸಮಿತಿ ಒಪ್ಪಿಗೆ ನೀಡಿದೆ.
ಮತ್ತಷ್ಟು
ತಾಯಿಗೆ ತಕ್ಕ ಮಗ: ಎತ್ತರಕ್ಕೇರುವತ್ತ ಪುಟಾಣಿ
ಗಾಂಧಿ ಎದುರು ನಿಯಮಗಳನ್ನೆಲ್ಲಾ ಸುಟ್ಟುಬಿಡಿ: ಚಟರ್ಜಿ ಕಿಡಿ
ಪ್ರಧಾನಿ ಭೇಟಿಗೆ ವಾರಣಾಸಿ ಸಜ್ಜು
ಅಧ್ಯಕ್ಷೆಯಾಗಿ 10ವರ್ಷ ಪೂರೈಸಿದ ಸೋನಿಯಾ
ಮಮತಾ ನಂದಿಗ್ರಾಮಕ್ಕೆ ಭೇಟಿ
ಶುಕ್ರವಾರ: ಶಂಕರ್ ರಾಮನ್ ಕೊಲೆ ಪ್ರಕರಣ ವಿಚಾರಣೆ