ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಸ್ತ್ರಾಸ್ತ್ರ ಅವ್ಯವಹಾರ : ನ್ಯಾಯಾಂಗ ಬಂಧನದಲ್ಲಿ ನಂದಾ
ಶಸ್ತ್ರಾಸ್ತ್ರ ಖರೀದಿ ಪ್ರಕರಣದಲ್ಲಿ ಅವ್ಯವಹಾರ ಎಸಗಿ ಸಾಕ್ಷಿಗಳನ್ನು ತಿರುಚುವ ಪ್ರಯತ್ನ ಮಾಡಿದ ಆರೋಪದಡಿಯಲ್ಲಿ ಶಸ್ತ್ರಾಸ್ತ್ರ ದಲ್ಲಾಳಿ ಸುರೇಶ್ ನಂದಾ, ಅವರ ಮಗ ಮತ್ತಿಬ್ಬರನ್ನು ದೆಹಲಿ ನ್ಯಾಯಾಲಯವು ಎರಡು ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.

ಬಿಎಂಡಬ್ಲು ಹಿಟ್ ಆಂಡ್ ರನ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ನಂದಾ ಮತ್ತು ಅವರ ಮಗ ಸಂಜೀವ ನಂದಾ, ಲೆಕ್ಕ ಪತ್ರ ಪರಿಶೋಧಕ ಬಿಪಿನ್ ಶಾ ಆದಾಯ ತೆರಿಗೆ ಉಪ ನಿರ್ದೇಶಕ (ತನಿಖಾದಳ) ಅಶುತೋಷ್ ವರ್ಮಾರನ್ನು ನಿಯೋಜಿತ ವಿಶೇಷ ನ್ಯಾಯಾಧೀಶ ಎದುರು ಹಾಜರು ಪಡಿಸಿದ ನಂತರ ಮಾರ್ಚ್ 28ರವರೆಗೆ ನ್ಯಾಯಾಲಯ ಬಂಧನದಲ್ಲಿ ಇರುವಂತೆ ಆದೇಶ ನೀಡಿದರು.

ಮಾರ್ಚ್ ಎಂಟರಂದು ಮುಂಬೈಯ ಹೋಟೆಲ್‌ವೊಂದರ ಮೇಲೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಮುನ್ನ ಆರೋಪಿಗಳು ಮೂರು ದಿನಗಳ ಕಾಲ ಸಿಬಿಐ ವಶದಲ್ಲಿ ಇದ್ದರು.

ಇನ್ನೊಂದು ವಾರಗಳ ಕಾಲ ಆರೋಪಿತರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೇಳಿಕೊಂಡಿದ್ದ ಸಿಬಿಐ, ನ್ಯಾಯಾಲಯದ ಎದುರು ನಂದಾ ಕುಟುಂಬ ಮತ್ತು ಅವರ ಸಹವರ್ತಿಗಳ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದೊರೆತ ಆದಾಯ ತೆರಿಗೆ ದಾಖಲೆಗಳನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿತ್ತು.

1999ರ ಐಎಸ್ ಅಧಿಕಾರಿ ವರ್ಮಾ, ನಂದಾ ಅವರ ಆದಾಯ ತೆರಿಗೆಯನ್ನು ವಂಚಿಸುವುದಕ್ಕೆ ಸಹಾಯ ಮಾಡಿದ್ದು ಪ್ರತಿಯಾಗಿ ಅಪಾರ ಮೊತ್ತದ ಲಂಚ ಪಡೆದು ಗೋವಾದಲ್ಲಿ ಬೆನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿದೆ.

ವಿಶೇಷ ನ್ಯಾಯಾಧೀಶ ಕೋಚರ್ ಅವರ ಎದುರು ನಡೆದ ವಿಚಾರಣೆಯಲ್ಲಿ ನಂದಾ ಪರ ವಾದಿಸುತ್ತಿರುವ ನ್ಯಾಯವಾದಿ ಸಿದ್ದಾರ್ಥ್ ಲುಕ್ರಾ ಅವರು ಆರೋಪಿತರು ಈಗಾಗಲೇ ಸಿಬಿಐ ವಶದಲ್ಲಿ ಒಂದು ವಾರಗಳ ಕಾಲ ಇದ್ದು, ಆರೋಪಿತರನ್ನು ಸಿಬಿಐ ವಶಕ್ಕೆ ನೀಡುವುದರಲ್ಲಿ ಅರ್ಥವಿಲ್ಲ ಎಂದು ವಾದಿಸಿದರು.
ಮತ್ತಷ್ಟು
ಸರಕಾರ ಬಿದ್ದರೆ ನಾವು ಜವಾಬ್ದಾರರಲ್ಲ: ಕಾರಟ್
ತಾಯಿಗೆ ತಕ್ಕ ಮಗ: ಎತ್ತರಕ್ಕೇರುವತ್ತ ಪುಟಾಣಿ
ಗಾಂಧಿ ಎದುರು ನಿಯಮಗಳನ್ನೆಲ್ಲಾ ಸುಟ್ಟುಬಿಡಿ: ಚಟರ್ಜಿ ಕಿಡಿ
ಪ್ರಧಾನಿ ಭೇಟಿಗೆ ವಾರಣಾಸಿ ಸಜ್ಜು
ಅಧ್ಯಕ್ಷೆಯಾಗಿ 10ವರ್ಷ ಪೂರೈಸಿದ ಸೋನಿಯಾ
ಮಮತಾ ನಂದಿಗ್ರಾಮಕ್ಕೆ ಭೇಟಿ