ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಡಪಕ್ಷಗಳು ಬೆಂಬಲ ಹಿಂತೆಗೆದಲ್ಲಿ ಸರಕಾರ ಕುಸಿಯದು: ಸಿಪಿಐ
ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ಎಡಪಕ್ಷಗಳು, ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಬೆಂಬಲ ಹಿಂತೆಗೆದುಕೊಂಡಲ್ಲಿ ಸರಕಾರ ಬಿದ್ದುಹೋಗದು ಎಂಬ ಸುಳಿವನ್ನು ಸಿಪಿಐ ನೀಡಿದೆ.

ಆದರೆ, ಯುಪಿಎ ಸರಕಾರದ ವಿರುದ್ಧ ಎಡಪುಕ್ಷವು ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆಯೇ ಅಥವಾ, ಈ ಕುರಿತಂತೆ ಸರಕಾರದ ವಿರುದ್ಧದ ಬಿಜೆಪಿ ಚಳುವಳಿಗೆ ಬೆಂಬಲ ಸೂಚಿಸುವುದೆ ಎಂಬ ಪ್ರಶ್ನೆಗೆ ಉತ್ತರಿಸದೆ ಎ.ಬಿ ಬರ್ದಾನ್ ನುಣುಚಿಕೊಂಡರು.

ಕರಣ್ ಥಾಪರ್ ಅವರ ಡೆವಿಲ್ಸ್ ಅಡ್ವೋಕೇಟ್ ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಎಡಪಕ್ಷಗಳು ಬೆಂಬಲ ವಾಪಾಸು ಪಡೆದಲ್ಲಿ ಸರಕಾರ ಮುಂದುವರಿಯುವುದೇ ಇಲ್ಲವೆ ಎಂಬುದನ್ನು ಸಂಸತ್ತು ನೋಡಿಕೊಳ್ಳುತ್ತದೆ ಎಂದು ನುಡಿದರು.

ಒಂದೊಮ್ಮೆ ಸರಕಾರವು ಅಲ್ಪಸಂಖ್ಯಾತವಾದಲ್ಲಿ, ಈ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿಹಾಕಲಿದೆಯೇ ಎಂಬ ಪ್ರಶ್ನೆಗೆ, ಒಂದೊಮ್ಮೆ ಹಾಗೆ ಮಾಡಿದಲ್ಲಿ, ಸರಕಾರವು ವಿಶ್ವಾಸವನ್ನು ಮಾತ್ರಕಳೆದುಕೊಳ್ಳುವುದಲ್ಲ, ಅದು ನೈತಿಕತೆ ಮತ್ತು ಮೌಲ್ಯವನ್ನೂ ಸಹ ಕಳೆದುಕೊಳ್ಳುತ್ತದೆ ಎಂದು ನುಡಿದರಲ್ಲದೆ, "ಒಂದು ಅಲ್ಪಸಂಖ್ಯಾತ ಸರಕಾರವು ಈ ಒಪ್ಪಂದಕ್ಕೆ ಸಹಿಹಾಕಲು ಸಾಧ್ಯವೆ" ಎಂಬ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿಯವರ ಹೇಳಿಕೆಯನ್ನು ಪ್ರಸ್ತಾಪಿಸಿದರು.
ಮತ್ತಷ್ಟು
ಅವಧಿಗೆ ಮುನ್ನ ಚುನಾವಣೆ ಇಲ್ಲ: ಪ್ರಧಾನಿ
ಶಸ್ತ್ರಾಸ್ತ್ರ ಅವ್ಯವಹಾರ : ನ್ಯಾಯಾಂಗ ಬಂಧನದಲ್ಲಿ ನಂದಾ
ಸರಕಾರ ಬಿದ್ದರೆ ನಾವು ಜವಾಬ್ದಾರರಲ್ಲ: ಕಾರಟ್
ತಾಯಿಗೆ ತಕ್ಕ ಮಗ: ಎತ್ತರಕ್ಕೇರುವತ್ತ ಪುಟಾಣಿ
ಗಾಂಧಿ ಎದುರು ನಿಯಮಗಳನ್ನೆಲ್ಲಾ ಸುಟ್ಟುಬಿಡಿ: ಚಟರ್ಜಿ ಕಿಡಿ
ಪ್ರಧಾನಿ ಭೇಟಿಗೆ ವಾರಣಾಸಿ ಸಜ್ಜು