ಟಿಬೆಟ್ ರಾಜಧಾನಿ ಲ್ಹಾಸದಲ್ಲಿ, ಟಿಬೆಟ್ ಸನ್ಯಾಸಿಗಳ ಮೇಲೆ ನಡೆಸಿರುವ ಹಿಂಸಾಚಾರವನ್ನು ಪ್ರತಿಭಟಿಸಿ ನವದೆಹಲಿಯಲ್ಲಿರುವ ಚೀನ ರಾಯಭಾರ ಕಚೇರಿ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಶನಿವಾರ ಮುಂಜಾನೆ ಸುಮಾರು 50 ಟಿಬೇಟಿಗರನ್ನು ಬಂಧಿಸಲಾಗಿದೆ.
ಮುಂಜಾನೆ ಸುಮಾರು 11 ಗಂಟೆ ವೇಳೆಗೆ, ಮಹಿಳೆಯರನ್ನೂ ಒಳಗೊಂಡಿದ್ದ ಪ್ರತಿಭಟನಾಕಾರರ ಗುಂಪು ಬಿಗಿ ಭದ್ರತೆಯ ಚಾಣಕ್ಯಪುರಿ ಪ್ರದೇಶದಲ್ಲಿರುವ ಚೀನ ರಾಯಭಾರ ಕಚೇರಿಯತ್ತ ತೆರಳಲು ಯತ್ನಿಸುತ್ತಿದ್ದಾಗ ಅವರನ್ನು ಪೊಲೀಸರು ತಡೆದರು.
ನಿಷೇಧಿತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸುತ್ತಿದ್ದ ಸುಮಾರು 50 ಟಿಬೇಟಿಯನ್ನರನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
|