ಸ್ಕಾರ್‌ಲೆಟ್ ಕೊಲೆ ಪ್ರಕರಣದಲ್ಲಿ ಗೋವಾದ ಗೃಹಸಚಿವ ರವಿನಾಯಕ್ ಹಾಗೂ ಪೊಲೀಸ್ ಡಿಜಿಪಿ ಬಿ.ಎಸ್.ಬ್ರಾರ್ ಮತ್ತು ಸ್ಥಳಿಯ ಮಾದಕ ವಸ್ತುಗಳ ಮಾಫಿಯಾದ ವ್ಯಕ್ತಿಗಳು ಆರೋಪಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂದು ಮೃತಳ ತಾಯಿ ಫೈವೊನಾ ಆರೋಪಿಸಿದ ಹಿನ್ನೆಲೆಯಲ್ಲಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.
ಗೋವಾದ ಪೊಲೀಸರು ಪ್ರಕರಣವನ್ನು ಪತ್ತೆಹಚ್ಚಿರುವುದಾಗಿ ಹೇಳುತ್ತಿರುವುದು ಸುಳ್ಳು. ಗೃಹಸಚಿವ ಹಾಗೂ ಪೊಲೀಸ್ ಡಿಜಿಪಿ ಬಿ.ಎಸ್.ಬ್ರಾರ್ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಫೈವೊನಾ ಆರೋಪಿಸಿದ್ದಾರೆ.
ಗೋವಾದ ಮಕ್ಕಳ ಕಾಯ್ದೆ ಅನ್ವಯ ಪೊಲೀಸರು ನೋಟಿಸ ಜಾರಿ ವಿಚಾರಣೆಗೆ ಹಾಜರಾಗುವಂತೆ ಫೈವೊನಾಗೆ ಆದೇಶಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.
ಅಂಜುನಾ ಬೀಚ್‌ನಲ್ಲಿ ಹತ್ಯೆಯಾದ ಸ್ಕಾರ್‌ಲೆಟ್ ಪ್ರಕರಣದ ಆರೋಪಿಗಳಾದ ಸ್ಯಾಮ್‌ಸನ್ ಡಿಸೋಜಾ ಮತ್ತು ಪ್ಲೆಸಿಡೊ ಕ್ರವಾಲೊ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
|