ಮಾನವ ಹಕ್ಕುಗಳಿಗೆ ನೀಡಿದ ಕೊಡುಗೆ ಹಾಗೂ ಜೈಲು ಸುಧಾರಣೆಯಲ್ಲಿ ಮಾಡಿರುವ ಅದ್ಭುತ ಕ್ರಾಂತಿಯನ್ನು ಪರಿಗಣಿಸಿ, ರಾಷ್ಟ್ರದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಣಿ ಕಿರಣ್ ಬೇಡಿ ಅವರನ್ನು ಅನ್ನೆಮೇರಿ-ಮೆಡ್ಡಿಸನ್ ಪ್ರಶಸ್ತಿಗಾಗಿ ಆರಿಸಲಾಗಿದೆ.
ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಕೆಐಎಸ್ ಬೋರ್ಡ್ ಆಫ್ ಟ್ರಸ್ಟೀಸ್ ಆಂಡ್ ಕ್ಯುರೇಟರ್‌ಶಿಫ್ ಫಾರ್ ಇಮ್ಯೂನೊಡಿಫಿಸಿಯನ್ಸಿಯು ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಕಿರಣ್ ಅವರಿಗೆ ಪ್ರಶಸ್ತಿ ನೀಡಿರುವುದಾಗಿ ಪ್ರಕಟಣೆಯೊಂದು ತಿಳಿಸಿದೆ. ಪ್ರಶಸ್ತಿಯು 5000 ಯೂರೊ ಡಾಲರ್ ನಗದು ಮೊತ್ತವನ್ನು ಹೊಂದಿದೆ.
ತಿಹಾರ್ ಜೈಲಿನ ಸುಧಾರಣೆ ಸೇರಿದಂತೆ ಇವರ ಬಗಲಲ್ಲಿ ಅನೇಕ ಸುಧಾರಣೆಗಳ ಗರಿಮೆಗಳಿವೆ ಎಂದು ಸಂಸ್ಥೆಯು ಹೇಳಿದೆ. ಆರೋಗ್ಯವಂತ ಆಹಾರ ಹಾಗೂ ಉತ್ತಮ ನೈರ್ಮಲ್ಯ ವ್ಯವಸ್ಥೆ ಸೇರಿದಂತೆ ಅನೇಕ ಸುಧಾರಣೆಗಳಿಗೆ ಕಿರಣ್ ಬೇಡಿ ಹೆಸರುವಾಸಿಯಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೇಡಿ, ಈ ಮೊತ್ತವನ್ನು ತಾನು ತನ್ನ ಹೊಸಯೊಜನೆ ಸುರಕ್ಷಾ ಭಾರತಕ್ಕಾಗಿ ವಿನಿಯೋಗಿಸುವುದಾಗಿ ನುಡಿದರು. ಅವರು ಸ್ವಯಂ ನಿವೃತ್ತಿ ಪಡೆದ ಬಳಿಕ ಆರಂಭಿಸಿರುವ www.saferindia.com ಮೂಲಕ ದೂರುದಾರರಿಗೆ ಪೊಲೀಸರಿಂದ ಪ್ರತಿಸ್ಪಂದನ ಒದಗಿಸಲಾಗುತ್ತದೆ.
|