ಮೇಲು ಅಸ್ಸಾಂನ ಗ್ರಾಮವೊಂದರಲ್ಲಿ ನಡೆದ ಬುಡಕಟ್ಟು ಸಮಾರಂಭದಲ್ಲಿ ಶಂಕಿತ ಉಲ್ಫಾ ಉಗ್ರಗಾಮಿಗಳು ಸ್ಫೋಟಿಸಿದ ಬಾಂಬ್ ದಾಳಿಯಲ್ಲಿ ನಾಲ್ವರು ಸತ್ತಿದ್ದಾರೆ ಮತ್ತು 53 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಕೂಡ ಸೇರಿದ್ದಾರೆ.
ಜೊನಾಯ್ ದೂರವಾಣಿ ವಿನಿಮಯ ಕೇಂದ್ರದ ಬಳಿ ಸ್ಥಳೀಯ ಲ್ರಿಗಾಂಗ್ ಉತ್ಸವವನ್ನು ಶನಿವಾರ ಸಂಜೆ ಆಚರಿಸುತ್ತಿದ್ದಾಗ ಮೈದಾನವೊಂದರಲ್ಲಿ ಬಾಂಬ್ ಸ್ಫೋಟಿಸಿತೆಂದು ಅಧಿಕೃತ ಮೂಲಗಳು ತಿಳಿಸಿವೆ. ಸಾಂಸ್ಕೃತಿಕ ಹಬ್ಬಕ್ಕಾಗಿ 1500ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ನೆರೆದಿದ್ದರೆಂದು ಮೂಲಗಳು ಹೇಳಿವೆ.
ಗಾಯಾಳುಗಳನ್ನು ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳವನ್ನು ಸುತ್ತುವರೆದಿದ್ದು, ಪರಿಹಾರ ಮತ್ತು ರಕ್ಷಣೆ ಕಾರ್ಯಾಚರಣೆಯನ್ನು ತಕ್ಷಣ ಆರಂಭಿಸಲಾಗಿದೆ. ಭಾನುವಾರ ಉಲ್ಫಾ ಸಂಸ್ಥಾಪನಾ ದಿನವಾಗಿರುವುದರಿಂದ ಕಳೆದ ಒಂದು ವಾರದಿಂದ ಉಲ್ಫಾ ತನ್ನ ಹಿಂಸಾತ್ಮಕ ಚಟುವಟಿಕೆಗಳನ್ನು ಹೆಚ್ಚಿಸಿದೆ.
|