ವ್ಯಾಜ್ಯಪರಿಹಾರವೊಂದರ ವೇಳೆ ಸುಪ್ರೀಂ ಕೋರ್ಟ್ ಪ್ರಾಚೀನ ಭಾರತದ ಮೀಮಾಂಸ ತತ್ವಗಳ ಮೊರೆ ಹೋದ ಕೂತೂಹಲಕಾರಿ ಘಟನೆ ನಡೆದಿದೆ. ವಿದ್ಯುತ್ ಉತ್ಪಾದನಾ ಕಂಪೆನಿ ಹಾಗೂ ಪರವಾನಗಿದಾರರ ನಡುವಿನ ಬಿಕ್ಕಟ್ಟನ್ನು ಪರಿಸಲು, ನ್ಯಾಯಾಲಯವು ವೇದಗಳಕಾಲದಲ್ಲಿ ಪೂರ್ವಿಕರು ಬಳಸಿಕೊಳ್ಳುತ್ತಿದ್ದ ವ್ಯಾಖ್ಯಾನ ತತ್ವಗಳ ಸಹಾಯ ಪಡೆಯಿತು.
ಈ ತತ್ವಗಳ ಆಧಾರದ ಮೇಲೆ ನ್ಯಾಯಾಲಯವು, ವಿದ್ಯುತ್ ಉತ್ಪಾದನಾ ಕಂಪೆನಿ ಹಾಗೂ ಪರವಾನಗಿದಾರರ ನಡುವಿನ ವ್ಯಾಜ್ಯವನ್ನು ಪರಿಹರಿಸುವ ಅಧಿಕಾರ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಅಥವಾ ಕೇಂದ್ರೀಯ ಆಯೋಗಕ್ಕೆ ಮಾತ್ರವಿದೆ ಎಂಬ ಐತೀರ್ಪು ನೀಡಿದೆ.
ಗುಜರಾತ್ ಉಜ್ರಾ ವಿಕಾಸ್ ನಿಗಮ್(ಜಿಯುವಿಎನ್) ಮತ್ತು ಎಸ್ಸಾರ್ ಪವರ್ ನಡುವಿನ ವಿವಾದ ಪರಿಹಾರಕ್ಕೆ ಗುಜರಾತ್ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಎ.ಎಚ್.ಅಹ್ಮದಿ ಅವರನ್ನು ನೇಮಿಸಿರುವ ತೀರ್ಪನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್ ಈ ಮೇಲಿನ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಎಚ್.ಕೆ.ಸೇಮ ಹಾಗೂ ಮಾರ್ಕಾಂಡೆ ಕಟ್ಜು ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದ್ದು, "ವಿಶೇಷ ಕಾನೂನು ಸಾಮಾನ್ಯ ಕಾನೂನುಗಳನ್ನು ಹಿಂದಿಕ್ಕುತ್ತದೆ. ವಿವಾದವನ್ನು ತಾನೇ ಪರಿಹರಿಸಬೇಕೊ ಇಲ್ಲವೇ ತಾನು ನೇಮಿಸಿದ ಮಧ್ಯಸ್ಥಗಾರನಿಗೆ ಶಿಫಾರಸು ಮಾಡಬೇಕೊ ಎಂಬುದು ರಾಜ್ಯ ಆಯೋಗದ ವಿವೇಚನೆಗೆ ಬಿಟ್ಟ ವಿಚಾರ" ಎಂದು ಹೇಳಿದೆ.
ಆದರೆ ಕುತೂಹಲವೆಂಬಂತೆ ವಿವಾದವನ್ನು ಪರಿಹರಿಸುವ ವೇಳೆಗೆ ನ್ಯಾಯಾಲಯವು, ಯಾಗಯಜ್ಞಾದಿಗಳ್ನು ಪೂರೈಸುವ ವೇಳೆಗೆ ಉದ್ಭವಿಸುವ ಪ್ರಾಯೋಗಿತ ಸಮಸ್ಯೆಗಳ ನಿವಾರಣೆಗೆ ಸೃಷ್ಠಿಸಲಾಗಿರುವ ಸ್ಮೃತಿ(ಮಾನವೀಯ ವರ್ತನೆಯ ಸಾಮಾನ್ಯ ತತ್ವಗಳು) ಹಾಗೂ ಶೃತಿ(ಶಾಶ್ವತ ಮೌಲ್ಯ) ಮೀಮಾಂಸ ತತ್ವಗಳ ಸಹಾಯ ಪಡೆಯಿತು.
|