ಲ್ಹಾಸದಲ್ಲಿನ ಹಿಂಸಾಚಾರವು ಲೋಕ ಸಭೆಯಲ್ಲಿ ಭಾರೀ ಗದ್ದಲ ಸೃಷ್ಟಿಸಿದ್ದು, ಭಾರತವು ಈ ಘಟನೆಯನ್ನು ಖಂಡಿಸಬೇಕು ಮತ್ತು ಅಮೆರಿಕವು ಈ ವಿಚಾರದಲ್ಲಿ ಮಧ್ಯಪ್ರವೇಶಿಸ ಬೇಕು ಎಂದು ಪ್ರಮುಖ ವಿರೋಧ ಪಕ್ಷಗಳು ಒತ್ತಾಯಿಸಿದವಲ್ಲದೆ, ಪ್ರಧಾವ ವಿರೋಧ ಪಕ್ಷವು ಸಭಾತ್ಯಾಗವನ್ನೂ ಮಾಡಿತು.
ಸದಸ್ಯರ ಕಾಳಜಿಗೆ ಸ್ಪಂದಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ, ಹಿಂಸಾಚಾರ ಮತ್ತು ಇತ್ಯರ್ಥಗೊಳ್ಳದ ಪರಿಸ್ಥಿತಿಯ ಕುರಿತು ಬೇಗುದಿ ವ್ಯಕ್ತಪಡಿಸಿದರಲ್ಲದೆ, ಚೀನದ ಸ್ವಾಯತ್ತ ಪ್ರದೇಶದಲ್ಲಿನ ಪ್ರಕ್ಷುಬ್ಧತೆಯ ಕಾರಣಗಳನ್ನು ಮಾತುಕತೆ ಮತ್ತು ಅಹಿಂಸಾ ವಿಧಾನಗಳ ಮೂಲಕವೇ ಪರಿಹರಿಸಬೇಕು ಎಂದು ನುಡಿದರು.
ಸರಕಾರವು ಈ ಕುರಿತಂತೆ ಈಗಾಲೇ ಹೆಳಿಕೆಯನ್ನು ನೀಡಿರುವುದಾಗಿ ಅವರು ಸದನಕ್ಕೆ ತಿಳಿಸಿದರು. ಈ ವಿಚಾರವನ್ನು ಶೂನ್ಯವೇಳೆಗೆ ಎತ್ತಿದ ಬಿಜೆಪಿಯ ವಿ.ಕೆ.ಮಲ್ಹೋತ್ರ, ಲ್ಙಾಸದಲ್ಲಿ ಟಿಬೇಟಿಯನ್ನರ ನರಮೇಧ ನಡೆಯುತ್ತಿದೆ ಹಾಗೂ ಚೀನವು ಟಿಬೆಟನ್ನು ಸಾಂಸ್ಕೃತಿಕವಾಗಿ ಮುಗಿಸಲು ಯತ್ನಿಸುತ್ತಿದೆ ಎಂದು ದೂರಿದರು.
|