ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮನಬಂದಂತೆ ತಲಾಖ್‌ಗೆ ಕಡಿವಾಣ
ಮನಬಂದಂತೆ ತಲಾಖ್ ನೀಡುವುದನ್ನು ತಡೆಯಲು ಮುಂದಾಗಿರುವ ಅಖಿಲಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಮಂಡಳಿಯು, ಕೋಪದಲ್ಲಿ, ಕುಡಿದಮತ್ತಿನಲ್ಲಿ ಅಥವಾ ಅರೆನಿದ್ರಾವಸ್ಥೆಯಲ್ಲಿ ತಲಾಕ್ ನೀಡುವುದನ್ನು ಮತ್ತು ದೂರವಾಣಿ, ಎಸ್‌ಎಂಎಸ್ ಮತ್ತು ಇಂಟರ್‌ನೆಟ್ ಮೂಲಕ ತಲಾಕ್ ಘೋಷಿಸದಂತೆ ಪುರುಷರನ್ನು ನಿಷೇಧಿಸುವ ನಿಕಾನಾಮವನ್ನು ಭಾನುವಾರ ಘೋಷಿಸಿದೆ.

ಮಂಡಳಿಯ ಈ ಮಾದರಿ ನಿಕಾನಾಮ(ವಿಚ್ಛೇದನ ಘೋಷಣೆ)ವು ಮುಸ್ಲಿಂ ಮಹಿಳೆಯರನ್ನು ಹೇಗೆಂದರೆ ಹಾಗೆ ವಿಚ್ಛೇದನ ನೀಡುವ ಶೋಷಣೆಯಿಂದ ಪಾರು ಮಾಡುತ್ತದೆ. "ಶರಿಯತ್ ಪತ್ನಿಯ ಕಾನೂನುಬದ್ಧ ಹಕ್ಕನ್ನು ವಿವರಿಸುತ್ತದೆ ಮತ್ತು ಪತಿ ಮತ್ತು ಪತ್ನಿಯ ಕರ್ತವ್ಯಗಳನ್ನು ಕೂಡ ವಿವರಿಸುತ್ತದೆ. ಅದು ವಿವಾಹದ ಪ್ರಾಮುಖ್ಯತೆಗೆ ಮಹತ್ವ ನೀಡುತ್ತದೆ ಮತ್ತು ವಿಚ್ಛೇದನವನ್ನು ಪ್ರೋತ್ಸಾಹಿಸುವುದಿಲ್ಲ. ಇಸ್ಲಾಂ ನಿಯಮಗಳ ಅನ್ವಯ ನಾವು ನೂತನ ನಿಕಾನಾಮವನ್ನು ಕಠಿಣವಾಗಿ ರೂಪಿಸಿದ್ದೇವೆ. ವಿವಾಹಿತ ಯುವತಿಗೆ ಆಕೆಯ ಪತಿಯು ಯಾವುದೆ ಕಿರುಕುಳ ನೀಡುವುದನ್ನು ಮತ್ತು ಶೋಷಣೆಯನ್ನು ಅದು ಸ್ಪಷ್ಟವಾಗಿ ನಿರಾಕರಿಸುತ್ತದೆ" ಎಂದು ಮಹಿಳಾ ಮಂಡಳಿ ಮುಖ್ಯಸ್ಥೆ ಶೈಸ್ತಾ ಅಂಬರ್ ಹೇಳಿದ್ದಾರೆ ಅವರು ಲಕ್ನೊದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಮುಸ್ಲಿಂ ಮಹಿಳೆಯೊಬ್ಬಳು ಲಂಪಟ ಪತಿಯಿಂದ ದೂರವಾಗಲು ಕಾನೂನುಬದ್ಧ ಅರ್ಹತೆಯನ್ನು ನೀಡುತ್ತದೆ. ಇದಲ್ಲದೇ ಪತಿ ನಾಲ್ಕು ವರ್ಷಗಳ ತನಕ ತ್ಯಜಿಸಿದ್ದರೆ ಅಥವಾ ಅಸ್ವಾಭಾವಿಕ ಲೈಂಗಿಕತೆಗೆ ಪತ್ನಿಯನ್ನು ಬಲಾತ್ಕಾರ ಮಾಡಿದರೆ ಪತ್ನಿ ಪತಿಯಿಂದ ಪ್ರತ್ಯೇಕತೆಯನ್ನು ಕೋರಬಹುದು ಎಂದು ಶರಿಯತ್ ವಿವರಿಸಿದೆ.
ಮತ್ತಷ್ಟು
ಭಾರತ ಬಿಟ್ಟು ತೆರಳುತ್ತಿರುವೆ-ತಸ್ಲಿಮಾ
ಲೋಕಸಭೆಯ ಶಾಂತಿ ಕೆಡಿಸಿದ ಟಿಬೆಟ್ ಅಶಾಂತಿ
ಸರಬ್‌ಜಿತ್ ವಿಚಾರದಲ್ಲಿ ಮೃದುತ್ವ: ಭಾರತ ವಿಶ್ವಾಸ
ಮೀಮಾಂಸ ತತ್ವದ ಮೊರೆಹೋದ ಸು.ಕೋ
ಪಾಕ್‌ನೊಂದಿಗೆ ಶಾತಿಮಾತುಕತೆ ಮುಂದುವರಿಕೆ: ಆಂಟನಿ
ಬಾಂಬ್ ಸ್ಪೋಟಕ್ಕೆ ನಾಲ್ವರ ಬಲಿ