ಆದಷ್ಟು ಭಿನ್ನಾಭಿಪ್ರಾಯವನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರದ ಯುಪಿಎ ಮತ್ತು ಎಡಪಕ್ಷಗಳು ನಿರ್ಧರಿಸಿದ್ದು. ಈ ನಿಟ್ಟಿನಲ್ಲಿ ಎಡ ಮತ್ತು ಯುಪಿಎ ಸರಕಾರದ ಸಮನ್ವಯ ಸಮಿತಿ ಸಭೆಯನ್ನು ಮುಂದಿನ ತಿಂಗಳಿಗೆ ಮೂಂದುಡಲಾಗಿದೆ. ವಿಯೆನ್ನಾದಲ್ಲಿ ಭಾರತವನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿತ್ತಿರುವ ಅಣು ತಂತ್ರಜ್ಞಾನ ಸುರಕ್ಷತೆಗೆ ಸಂಬಂಧಿಸಿದ ಒಪ್ಪಂದದ ಫಲಿತಾಂಶ ತಿಳಿದ ನಂತರ ಉಭಯ ಪಕ್ಷಗಳು ಮಾತುಕತೆಗೆ ನಡೆಸಲಿವೆ.
ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಅಂತಾರಾಷ್ಟ್ರೀಯ ಅಣು ಪ್ರಾಧಿಕಾರದೊಂದಿಗೆ ಮಾಡಿಕೊಳ್ಳಲಾಗುವ ಕರಡು ಒಪ್ಪಂದದ ಮಾಹಿತಿಯನ್ನು ಎಡಪಕ್ಷಗಳಿಗೆ ಮಾತುಕತೆಯ ಸಂದರ್ಭದಲ್ಲಿ ಮಾಹಿತಿ ನೀಡಲಿದ್ದಾರೆ.
ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದದಲ್ಲಿ ಅಣು ಶಕ್ತಿ ಕೇಂದ್ರಗಳ ಸುರಕ್ಷತೆ, ಅಣು ಶಕ್ತಿ ಇಂಧನದ ಪೂರೈಕೆಯ ಬಗ್ಗೆ ಭಾರತ ವ್ಯಕ್ತಪಡಿಸಿರುವ ಕಳವಳಗಳ ಕುರಿತು ಅಂತಾರಾಷ್ಟ್ರೀಯ ಅಣು ಶಕ್ತಿ ಪ್ರಾಧಿಕಾರ ಸೂಕ್ತ ಗಮನ ನೀಡಬೇಕು ಎಂದು ಒಪ್ಪಂದದಲ್ಲಿ ಕೇಳಿಕೊಳ್ಳಲಾಗಿದೆ.
ಅಣ್ವಸ್ತ್ರ ರಾಷ್ಟ್ರವಾಗಿರುವ ಭಾರತ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರದ ಕಾರಣ, ಭಾರತಕ್ಕೆ ಯಾವ ರೀತಿ ಪ್ರಯೋಜನಗಳನ್ನು ಐಎಇಎ ನೀಡಬಹುದು ಎನ್ನುವುದರ ಕುರಿತು ಕೂಡ ಅಣು ಶಕ್ತಿ ಪ್ರಾಧಿಕಾರ ಚಿಂತನೆ ಮಾಡುತ್ತಿದೆ ಎಂದು ಪ್ರಣಬ್ ಮುಖರ್ಜಿ ಮಾಹಿತಿ ನೀಡಿದ್ದಾರೆ.
ಕರಡು ಒಪ್ಪಂದ ಮಾಹಿತಿಯನ್ನು ಪಡೆದ ವಿಸ್ತ್ರತ ಚರ್ಚೆಯಾಗಬೇಕು ಎಂದು ಸಿಪಿಐ (ಎಂ) ಕೇಳಿಕೊಂಡಿದ್ದು, ಎಪ್ರಿಲ್ ತಿಂಗಳಿನಲ್ಲಿ ಸಮನ್ವಯ ಸಮಿತಿಯ ಸಭೆಯನ್ನು ಕರೆಯಲಾಗಿದೆ ಎಂದು ಸುದ್ದಿಗಾರರಿಗೆ ಪಾಲಿಟ್ ಬ್ಯೂರೊ ಸದಸ್ಯ ಸಿತಾರಾಮ್ ಯೇಚೂರಿ ಹೇಳಿದ್ದಾರೆ.
|