ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವೀಡನ್‌‌‌ನತ್ತ ತಸ್ಲೀಮಾ ಪಯಣ
ಸೋಮವಾರದಂದು ಭಾರತವನ್ನು ತೊರೆಯುತ್ತೆನೆ ಎಂದು ಘೋಷಿಸಿದ್ದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಇಂದು ರಾತ್ರಿ ಸ್ವೀಡನ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ವರದಿಮಾಡಿವೆ.

ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ವಾಸವಿದ್ದ ಲೇಖಕಿಯ ವಿರುದ್ಧ ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಮತ್ತು ಹೈದ್ರಾಬಾದ್ ನಗರದಲ್ಲಿ ನಡೆದ ಹಲ್ಲೆಯಿಂದ ಮಾನಸಿಕವಾಗಿ ಘಾಸಿಗೊಂಡಿದ್ದಾರೆ ಅಲ್ಲದೇ ಭಾರತ ಸರಕಾರವು ಅವರ ವಸತಿಯನ್ನು ಕೆಲವು ದಿನಗಳ ಕಾಲ ಗುಪ್ತ ಸ್ಥಳದಲ್ಲಿ ವ್ಯವಸ್ಥೆ ಮಾಡಿತ್ತು.

ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ತಮ್ಮ ವಿದೇಶ ಪ್ರಯಾಣದ ಕುರಿತು ಮಾತನಾಡಿದ ನಂತರ ಗೃಹ ಬಂಧನದ ಹಾಗೆ ಇರುವ ಈ ರಕ್ಷಣೆಯನ್ನು ನನಗೆ ಸಹಿಸಲಾಗುತ್ತಿಲ್ಲ. ಮಾನಸಿಕವಾಗಿ ಕುಗ್ಗಿಹೋಗಿರುವ ನಾನು ಕೆಲವು ದಿನಗಳ ವಿಶ್ರಾಂತಿಗಾಗಿ ವಿದೇಶಕ್ಕೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿವಾದಗಳ ನಂತರ ಹೆಚ್ಚು ಕಡಿಮೆ ಏಕಾಂಗಿಯಾಗಿ ಜೀವಿಸುತ್ತಿರುವ ತಸ್ಲೀಮಾ ನಸ್ರೀನ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ರಕ್ಷಣೆಯ ಹೆಸರಿನಲ್ಲಿ ನನ್ನ ಜೀವನ ಹಾಳು ಬಿದ್ದಿದೆ. ಜನರೊಂದಿಗೆ ಮಾತನಾಡಲಾಗದ ಬೆರೆಯಲಾರದ ಪರಿಸ್ಥಿತಿಯಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು ಇದು ನೇರವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನುಡಿದರು.

ಭಾರತಕ್ಕೆ ಮರಳುವ ಕುರಿತು ಉತ್ತರಿಸಿದ ಅವರು ನನ್ನ ಅಚ್ಚುಮೆಚ್ಚಿನ ನಗರ ಕೊಲ್ಕತ್ತಾದಲ್ಲಿ ಸಾಮಾನ್ಯ ಜೀವನ ನಡೆಸಲು ಅನುವು ಮಾಡಿಕೊಟ್ಟರೆ ಭಾರತಕ್ಕೆ ಖಂಡಿತವಾಗಿ ಮರಳುತ್ತೆನೆ ಎಂದು ಹೇಳಿದರು.
ಮತ್ತಷ್ಟು
ಶಿವಾನಿ ಕೊಲೆ ಪ್ರಕರಣ: ಆರ್. ಕೆ. ಶರ್ಮಾ ಅಪರಾಧಿ
ಅಣು ಒಪ್ಪಂದ ಕಾಲಾವಕಾಶ ಕೇಳುತ್ತಿರುವ ಎಡಪಕ್ಷ
ಮನಬಂದಂತೆ ತಲಾಖ್‌ಗೆ ಕಡಿವಾಣ
ಭಾರತ ಬಿಟ್ಟು ತೆರಳುತ್ತಿರುವೆ-ತಸ್ಲಿಮಾ
ಲೋಕಸಭೆಯ ಶಾಂತಿ ಕೆಡಿಸಿದ ಟಿಬೆಟ್ ಅಶಾಂತಿ
ಸರಬ್‌ಜಿತ್ ವಿಚಾರದಲ್ಲಿ ಮೃದುತ್ವ: ಭಾರತ ವಿಶ್ವಾಸ